ಮಂಡ್ಯ:ಜಿಲ್ಲೆಯ ವೈದ್ಯಕೀಯ ಕಾಲೇಜಿನ (ಮಿಮ್ಸ್) ಹೆರಿಗೆ ವಾರ್ಡ್ ಬಳಿ ಬಾಣಂತಿಯರು ಹಾಗೂ ಸಂಬಂಧಿಕರಿಗೆ ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಯೋಗೇಶ್ ಹಾಗೂ ಪತ್ನಿ ಅರುಣ ಕುಮಾರಿ ಪ್ರತಿ ದಿನ ಬೆಳಗ್ಗೆ ಮತ್ತು ಮಧ್ಯಾಹ್ನ ಅನ್ನದಾಸೋಹ ಮಾಡುತ್ತಿದ್ದಾರೆ.
ಕೊರೊನಾ ನಡುವೆ ಬಾಣಂತಿಯರು, ಸಂಬಂಧಿಕರಿಗೆ ಅನ್ನದಾತರಾದ ದಂಪತಿ - Distribution of food by couple in Mandya
ಹಸಿವು ನೀಗಿಸುವುದು ಒಂದು ಪುಣ್ಯದ ಕೆಲಸ. ಹೀಗಾಗಿ ಬಡತನ, ಹಸಿವಿನಿಂದ ಸಂಕಟ ಎದುರಿಸುತ್ತಿರುವವರಿಗೆ ಅನ್ನ ನೀಡುವ ಮಾನವೀಯ ಕಾರ್ಯದಲ್ಲಿ ಇಲ್ಲೊಂದು ದಂಪತಿ ತೊಡಗಿಸಿಕೊಂಡಿದೆ.
ಓದಿ:ನಮ್ಮ ಪಕ್ಷದ ಅಜೆಂಡಾದಲ್ಲಿ ಸಿಎಂ ಬದಲಾವಣೆ ಇಲ್ಲವೇ ಇಲ್ಲ: ಡಿಸಿಎಂ ಕಾರಜೋಳ ಸ್ಪಷ್ಟನೆ
ಕೊರೊನಾ ಮೊದಲ ಅಲೆಯಿಂದ ಲಾಕ್ಡೌನ್ ಆದಾಗಲೂ ನಿತ್ಯ ಊಟ ನೀಡಲಾಯಿತು. ಕೊರೊನಾ ಬಳಿಕ ಅನ್ನದ ಬೆಲೆ ತಿಳಿದ ಸಾಕಷ್ಟು ಜನ ಬರ್ಥ್ ಡೇ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ಶುಭಾ ಕಾರ್ಯದಲ್ಲಿ ಒಂದು ಹೊತ್ತು ಊಟ ಹಾಕಿಸಲು ಹಣ ಸಹಾಯ ನೀಡುತ್ತಿದ್ದಾರೆ. ಒಂದು ಹೊತ್ತಿಗೆ ಸುಮಾರು 300 ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಸುಮಾರು ಮೂರೂವರೆ ಸಾವಿರದಿಂದ ನಾಲ್ಕು ಸಾವಿರ ಖರ್ಚು ಬರುತ್ತದೆ. ಆದರೆ, ಯಾರು ಸಹಕಾರ ನೀಡಲಿ, ನೀಡದಿರಲಿ ಒಂದೂ ದಿನವೂ ಆಹಾರ ವಿತರಣೆಯನ್ನು ನಿಲ್ಲಿಸಿಲ್ಲ.