ಮಂಡ್ಯ: ದೋಸ್ತಿಗಳು ಜಂಟಿ ಪತ್ರಿಕಾಗೋಷ್ಠಿ ಮಾಡಿದರೂ ಅಸಮಾಧಾನ ಕೊನೆಗೊಂಡಿಲ್ಲ. ಜಂಟಿ ಪತ್ರಿಕಾಗೋಷ್ಠಿ ನಡೆಸಿರುವ ಮಾಹಿತಿಯನ್ನೇ ನಮಗೆ ನೀಡಿಲ್ಲ ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯರು, ನಾಯಕರ ನಿರ್ಧಾರಕ್ಕೆ ಕೋಪಗೊಂಡಿದ್ದಾರೆ.
ನಾಯಕರ ನಿರ್ಧಾರಕ್ಕೆ ಮಂಡ್ಯ ನಗರಸಭೆ ಕಾಂಗ್ರೆಸ್ ಸದಸ್ಯರ ಅಸಮಾಧಾನ - ಕಾಂಗ್ರೆಸ್
ತಮಗೆ ಇಷ್ಟ ಬಂದ ರೀತಿಯಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರು ಹೋಗುತ್ತಿದ್ದಾರೆ ಎಂದು ಮಂಡ್ಯ ನಗರಸಭೆಯ ಕಾಂಗ್ರೆಸ್ ಸದಸ್ಯರು, ನಾಯಕರ ನಿರ್ಧಾರಕ್ಕೆ ಕೋಪಗೊಂಡಿದ್ದಾರೆ.
ಕಾಂಗ್ರೆಸ್ ಸದಸ್ಯರ ಅಸಮಾಧಾನ
ನಗರದ ಖಾಸಗಿ ಹೋಟೆಲ್‌ನಲ್ಲಿ ಗೌಪ್ಯ ಸಭೆ ಮಾಡಿದ 10 ಮಂದಿ ಸದಸ್ಯರು, ಜಿಲ್ಲಾ ನಾಯಕರ ನಿರ್ಧಾರಕ್ಕೆ ಆಸಮಾಧಾನ ಹೊರಹಾಕಿದ್ದಾರೆ. ನಮಗೆ ಮಾಹಿತಿ ನೀಡದೇ ಜಂಟಿ ಪತ್ರಿಕಾಗೋಷ್ಠಿ ಮಾಡಲಾಗಿದೆ. ಇದರ ಬಗ್ಗೆ ನಮಗೆ ಮಾಹಿತಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ನಿರ್ಧಾರ ಬೇರೆಯೇ ಇದೆ. ನಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಸಭೆ ಮಾಡಿರುವ ಸದಸ್ಯರು, ಶೀಘ್ರವೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತಮಗೆ ಇಷ್ಟ ಬಂದ ರೀತಿಯಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.