ಕರ್ನಾಟಕ

karnataka

ETV Bharat / state

ಚಿಂತೆಯಿಲ್ಲದೇ ಪ್ರಚಾರಕ್ಕೆ ಧುಮುಕಿದ ಜೆಡಿಎಸ್ ಅನರ್ಹ ಶಾಸಕ: ಮತದಾರರಿಗೆ ಭರ್ಜರಿ ಬಾಡೂಟ - By election candidate in K. R pete

ಮೈತ್ರಿ ಸರ್ಕಾರದಿಂದ ಹೊರಬಂದ ಅನರ್ಹ ಶಾಸಕ ಕೆ.ಸಿ. ನಾರಾಯಗೌಡ ಉಪಚುನಾವಣೆಗೆ ತಯಾರಿ ನಡೆಸುತ್ತಿದ್ದು, ಸ್ವಕ್ಷೇತ್ರದಲ್ಲಿ ಈಗಾಗಲೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಮತದಾರ ಪ್ರಭುವಿಗೆ ಭರ್ಜರಿ ಬಾಡೂಟದ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಮತದಾರ ಪ್ರಭುಗಳನ್ನು ಓಲೈಸುವತ್ತ ನಾರಯಣಗೌಡ

By

Published : Nov 2, 2019, 2:46 PM IST

ಮಂಡ್ಯ:ರಾಜ್ಯದಲ್ಲಿ ಅನರ್ಹ ಶಾಸಕರ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಕೆಲವು ಕ್ಷೇತ್ರಗಳಲ್ಲಿ ಟಿಕೆಟ್​​ಗಾಗಿ ಬಿಜೆಪಿಯಲ್ಲೇ ಗೊಂದಲ ಸೃಷ್ಟಿಯಾಗಿದೆ. ಆದರೆ, ಯಾವುದೇ ಗೊಂದಲವಿಲ್ಲದ ಕ್ಷೇತ್ರ ಅಂದರೆ ಅದು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ. ಹೀಗಾಗಿ ಬಿಜೆಪಿ ಸಂಭವನೀಯ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ಜೆಡಿಎಸ್ ಅನರ್ಹ ಶಾಸಕ ಕೆ.ಸಿ. ನಾರಾಯಗೌಡ ಉಪ ಚುನಾವಣೆಯ ತಯಾರಿ ಆರಂಭ ಮಾಡಿದ್ದಾರೆ.

ಮತದಾರ ಪ್ರಭುಗಳನ್ನು ಓಲೈಸುವತ್ತ ನಾರಯಣಗೌಡ

ಈಗಾಗಲೇ 2 ಸಭೆಗಳನ್ನು ಮುಗಿಸಿದ್ದು, ಪ್ರತಿಯೊಂದು ಸಭೆಯಲ್ಲೂ ಜೆಡಿಎಸ್ ವರಿಷ್ಠರು, ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರಕ್ಕೆ ಆದ ಮೋಸದ ಬಗ್ಗೆ ವಿವರವಾಗಿ ಜನತೆಯ ಮುಂದೆ ತಿಳಿಸುತ್ತಾ ಪ್ರಚಾರ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರಕ್ಕೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಯಿತು ಎಂದು ಮತದಾರರಿಗೆ ಮುಟ್ಟಿಸುತ್ತಿದ್ದಾರೆ. ಇವರ ಈ ಆರೋಪಕ್ಕೆ ಅವರ ಬೆಂಬಲಿಗರೂ ಧ್ವನಿ ಗೂಡಿಸುತ್ತಾ ಪ್ರಚಾರ ಕಾರ್ಯ ಆರಂಭ ಮಾಡಿದ್ದಾರೆ.

ಇನ್ನು ಸಭೆಯಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಭರ್ಜರಿ ಬಾಡೂಟ ಕೊಡಿಸಲಾಗುತ್ತಿದೆ. ಸಭೆಗೂ ಮೊದಲು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಭೆ ನಡೆಸಿ ನಂತರ ಸಾರ್ವಜನಿಕರ ಜೊತೆಯೇ ಅನರ್ಹ ಶಾಸಕ ನಾರಾಯಣಗೌಡ ಊಟ ಸವಿಯುತ್ತಾ ಜನರ ಜೊತೆಗೂಡುತ್ತಿದ್ದಾರೆ. ಸುಪ್ರೀಂ ತೀರ್ಪಿನ ನಂತರ ಅನರ್ಹರ ಭವಿಷ್ಯ ನಿರ್ಧಾರವಾದರೂ, ಕೆ.ಆರ್.ಪೇಟೆಯ ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲದೇ ಪ್ರಚಾರ ಮಾಡುತ್ತಿದ್ದಾರೆ ನಾರಾಯಣಗೌಡರು.

ABOUT THE AUTHOR

...view details