ಕರ್ನಾಟಕ

karnataka

ETV Bharat / state

ಮಂಡ್ಯ ಜಿ.ಪಂ. ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಸದ್ದು.. ಸಿಕ್ಕಿತಾ ಪರಿಹಾರ...! - ಕಬ್ಬು ಕಾರ್ಖಾನೆ

ಇಂದು ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಕಬ್ಬು ಕಾರ್ಖಾನೆಗಳಲ್ಲಿ ಕಬ್ಬು ಮಾರಾಟ, ಮಧ್ಯವರ್ತಿಗಳ ವರ್ತನೆಗಳ ಹಾಗೂ ಅಲ್ಲಿ ರೈತರಿಗೆ ಉಂಟಾಗುತ್ತಿರುವ ಸಮಸ್ಯೆ ಕುರಿತಂತೆ ಚರ್ಚೆ ನಡೆಯಿತು.

ಮಂಡ್ಯ ಜಿಪಂ ಸಭೆ

By

Published : Aug 19, 2019, 2:42 PM IST

Updated : Aug 19, 2019, 2:52 PM IST

ಮಂಡ್ಯ:ಮೈಶುಗರ್, ಪಿಎಸ್ಎಸ್‌ಕೆ ಇನ್ನೂ ಆರಂಭವಾಗಿಲ್ಲ. ಇದರ ಲಾಭ ಪಡೆಯಲು ಮಧ್ಯವರ್ತಿಗಳು ಮುಂದಾಗಿದ್ದಾರೆ. ಮಧ್ಯವರ್ತಿಗಳು ರೈತರಿಂದ ಕಬ್ಬು ಪಡೆದು, ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಜಿಪಂ ಸದಸ್ಯರು ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ಮಾಡಿದರು.

ಮಂಡ್ಯ ಜಿಪಂ ಸಭೆ

ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್​​ ಸಭೆ ಆರಂಭವಾಗುತ್ತಿದ್ದಂತೆ, ಸದಸ್ಯರಾದ ಶಿವಣ್ಣ ಸೇರಿದಂತೆ ಹಲವರು ವಿಚಾರವನ್ನು ಸಭೆಯ ಗಮನಕ್ಕೆ ತಂದು ಶೀಘ್ರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಜಿಲ್ಲಾಧಿಕಾರಿ ಅವರಿಗೆ ಪತ್ರದ ಮೂಲಕ ವಿಚಾರ ತಿಳಿಸಬೇಕು ಎಂದು ಸಲಹೆ ನೀಡಿದರು‌.

ಕೆಲವು ಮಧ್ಯವರ್ತಿಗಳು ರೈತರಿಂದ ಕಬ್ಬು ಪಡೆದು ಕಾರ್ಖಾನೆಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರ ಹಿಂದೆ ಕಂಪನಿಯ ಅಧಿಕಾರಿಗಳ ಕೈವಾಡ ಇರುವ ಅನುಮಾನ ವ್ಯಕ್ತಪಡಿಸಿದರು. ಅಧ್ಯಕ್ಷರು ಈ ವಿಚಾರವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

Last Updated : Aug 19, 2019, 2:52 PM IST

ABOUT THE AUTHOR

...view details