ಮಂಡ್ಯ:ಜಿಲ್ಲೆಯಲ್ಲಿ ಇಲ್ಲಿಯವರೆಗೆ 3,543 ಜನಕ್ಕೆ ಕೊರೊನಾ ಲಸಿಕೆ ನೀಡಲಾಗಿದೆ. ಪ್ರತಿದಿನ ಲಸಿಕೆ ಪಡೆಯಲು ಬರುವವರ ಸಂಖ್ಯೆ ಬದಲಾವಣೆಯಾಗುತ್ತಿದೆ ಎಂದು ಡಿಎಚ್ಓ ಡಾ. ಮಂಚೇಗೌಡ ತಿಳಿಸಿದರು.
ನಗರದ ಮಿಮ್ಸ್ ಆಸ್ಪತಗೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವಾರಿಯರ್ಸ್ಗಳಿಗೆ ನಿಗದಿತ ದಿನಾಂಕಕ್ಕೆ ಬರಬೇಕೆಂದು ಹೇಳಲಾಗಿದೆ. ವ್ಯಾಕ್ಸಿನ್ ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಕಾರಣ ಏನೆಂಬುದು ತಿಳಿಯುತ್ತಿಲ್ಲ. ಹೀಗಾಗಿ ಮೆಡಿಕಲ್ ಕಾಲೇಜಿನಲ್ಲಿ ಹೆಚ್ಚಿನ ಗಮನ ತೆಗೆದುಕೊಳ್ಳಲಾಗಿದ್ದು, ಇಂದು 80 ಜನ ಲಸಿಕೆ ಪಡೆದುಕೊಂಡಿದ್ದಾರೆ ಎಂದರು.
ಲಸಿಕೆ ಪಡೆದುಕೊಂಡವರಲ್ಲಿ 14 ಮಂದಿಯನ್ನು ಸ್ವಲ್ಪ ಅವಧಿಗೆ ನಿಗಾದಲ್ಲಿರಿಸಿ ಗುಣ ಮಾಡಲಾಗಿದೆ. ತಲೆ ನೋವು ಕಾಣಿಸಿಕೊಂಡಿದೆ ಅಷ್ಟೇ, ಎಲ್ಲರು ಸರಿ ಹೋಗಿದ್ದಾರೆ. ಜಿಲ್ಲೆಯಲ್ಲಿ ಎಲ್ಲೂ ಕೂಡ ಅತಂಕದ ಸನ್ನಿವೇಶ ನಡೆದಿಲ್ಲ. ಎಲ್ಲರೂ ಸಹ ಧೈರ್ಯದಿಂದ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಅಲರ್ಜಿ ಇರುವವರಿಗೆ ಲಸಿಕೆ ನೀಡಿಲ್ಲ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ 60 ಮಂದಿ ಲಸಿಕೆ ಪಡೆದಿದ್ದಾರೆ. ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ ಶೇ 40 ನಿಂದ 60ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ 74 ಕೇಂದ್ರ ಗುರುತಿಸಲಾಗಿದೆ. ಎಲ್ಲರಿಗೂ ಸಹ ಮಾಹಿತಿ ಕೊಡಲಾಗ್ತಿದೆ. ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಲಸಿಕೆ ನೀಡಲಾಗಿದೆ. ಯಾರೂ ಭಯ ಪಡಬೇಡಿ. ಎಲ್ಲರು ಸಹ ವ್ಯಾಕ್ಸಿನ್ ಪಡೆದುಕೊಳ್ಳಿ ಎಂದು ಡಿಎಚ್ಓ ಮಂಚೇಗೌಡ ಮನವಿ ಮಾಡಿದರು.