ಮಂಡ್ಯ :ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆಗೊಂಡು ಮೂರು ದಿನಗಳಾದ್ರೂ ಮಂಡ್ಯ ಜಿಲ್ಲೆಗೆ ಎಸ್‌ಪಿ ನೇಮಕವಾಗದಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿವೆ. ಈ ಹಿಂದೆ ಖಡಕ್ ಐಪಿಎಸ್ ಅಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರನ್ನ ಮಂಡ್ಯ ಜಿಲ್ಲೆಗೆ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಮಂಡ್ಯ ರಾಜಕಾರಣಿಗಳು ಖಡಕ್ ಅಧಿಕಾರಿಗೆ ಬೆದರುತ್ತಿದ್ದಾರಾ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತಿದೆ.
ಪುರುಷ ಐಪಿಎಸ್ ಅಧಿಕಾರಿಗಾಗಿ ಹುಡುಕಾಟ :ಜಿಲ್ಲಾಮಟ್ಟದ ಬಹುತೇಕ ಅಧಿಕಾರಿಗಳು ಮಹಿಳೆಯರು ಇದ್ದು, ಎಸ್ಪಿಯಾಗಿ ಮತ್ತೆ ಮಹಿಳಾ ಅಧಿಕಾರಿ ಬೇಡ ಎಂದು ಕರ್ನಾಟಕ ಮೂಲದ ಪುರುಷ ಐಪಿಎಸ್ ಅಧಿಕಾರಿ ತರಲು ರಾಜಕಾರಣಿಗಳು ಹುಡುಕಾಟ ನಡೆಸುತ್ತಿದ್ದಾರಾ? ಅಥವಾ ಜಿಲ್ಲೆಗೆ ಬೇರೆ ಯಾರದ್ರೂ ಪೊಲೀಸ್ ಅಧಿಕ್ಷಕರ ನೇಮಕಕ್ಕೆ ಪ್ರಭಾವಿ ರಾಜಕಾರಣಿಯಿಂದ ಸರ್ಕಾರದ ಮಟ್ಟದಲ್ಲಿ ಒತ್ತಡ ಇದಿಯಾ? ಎಂಬ ಶಂಕೆ ವ್ಯಕ್ತವಾಗುತ್ತಿದೆ.