ಮಂಡ್ಯ:ಆಹಾರ ಹುಡುಕಿಕೊಂಡು ನಾಡಿಗೆ ಬಂದ ಅಪರೂಪದ ಗಂಡು ಜಿಂಕೆಯೊಂದು ನಾಯಿಗಳ ದಾಳಿಗೆ ಬಲಿಯಾದ ಘಟನೆ ಮಳವಳ್ಳಿ ತಾಲೂಕಿನ ಬಾಳೆಹೊನ್ನಿಗ ಗ್ರಾಮದಲ್ಲಿ ನಡೆದಿದೆ.
ಆಹಾರ ಅರಸಿ ಬಂದ ಜಿಂಕೆನೇ ನಾಯಿಗಳಿಗೆ ಆಹಾರವಾಯ್ತು! - ಮಂಡ್ಯ ಜಿಂಕೆ ನಾಯಿಗಳ ದಾಳಿಗೆ ಸಾವು
ಆಹಾರ ಅರಸಿ ಬಂದ ಅಪರೂಪದ ಗಂಡು ಜಿಂಕೆಯನ್ನ ನಾಯಿಗಳು ಕಚ್ಚಿ ಕೊಂದಿವೆ. ಮಳವಳ್ಳಿ ತಾಲೂಕಿನ ಬಾಳೆಹೊನ್ನಿಗ ಗ್ರಾಮದಲ್ಲಿ ಈ ಘಟನೆ ನಡೆದಿದೆ.
![ಆಹಾರ ಅರಸಿ ಬಂದ ಜಿಂಕೆನೇ ನಾಯಿಗಳಿಗೆ ಆಹಾರವಾಯ್ತು! Deer that came in search of food died due to dog attack](https://etvbharatimages.akamaized.net/etvbharat/prod-images/768-512-5460813-thumbnail-3x2-hjghtgh.jpg)
ಆಹಾರ ಅರಸಿ ಬಂದ ಜಿಂಕೆ ನಾಯಿಗಳ ದಾಳಿಗೆ ಬಲಿ
ಗ್ರಾಮಕ್ಕೆ ಬಂದ ಜಿಂಕೆಯನ್ನು ನಾಯಿಗಳು ಅಟ್ಟಾಡಿಸಿ ಕಚ್ಚಿ ಕೊಂದಿವೆ. ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾವಿಗೀಡಾದ ಜಿಂಕೆಯನ್ನು ಕಚೇರಿಗೆ ಒಯ್ದು ಬಳಿಕ ಅಂತ್ಯಕ್ರಿಯೆ ಮಾಡಿದ್ದಾರೆ.