ಮಂಡ್ಯ:ಕೆರೆಯಲ್ಲಿ ಹಸು ತೊಳೆಯಲು ಹೋದ ಯುವಕ ಹಾಗೂ ಆತನ ರಕ್ಷಣೆಗೆ ತೆರಳಿದ ಯುವಕನೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೆ.ಆರ್. ಪೇಟೆ ತಾಲೂಕಿನ ಉಳಿಗಂಗನಹಳ್ಳಿ ಕೆರೆಯಲ್ಲಿ ನಡೆದಿದೆ.
ಕೆ.ಆರ್.ಪೇಟೆ: ಕೆರೆ ನೀರಲ್ಲಿ ಮುಳುಗಿ ಯುವಕರಿಬ್ಬರ ಸಾವು - k r nagar latest news
ಇಂದು ಮಧ್ಯಾಹ್ನ ಅಭಿಷೇಕ್ ಹಸು ತೊಳೆಯಲು ಕೆರೆಗೆ ಹೋದಾಗ ನೀರಿನಲ್ಲಿ ಆಯತಪ್ಪಿ ಬಿದ್ದು ಮುಳುಗಿದ್ದಾನೆ. ಇದನ್ನು ನೋಡಿದ ಕುಮಾರ್ ಆತನ ರಕ್ಷಣೆಗೆ ದಾವಿಸಿದಾಗ ಇಬ್ಬರೂ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ.
![ಕೆ.ಆರ್.ಪೇಟೆ: ಕೆರೆ ನೀರಲ್ಲಿ ಮುಳುಗಿ ಯುವಕರಿಬ್ಬರ ಸಾವು death-of-two-youths-drowned-in-pools-of-water](https://etvbharatimages.akamaized.net/etvbharat/prod-images/768-512-7613878-751-7613878-1592133815998.jpg)
ಕೆ.ಆರ್.ಪೇಟೆ: ಕೆರೆ ನೀರಲ್ಲಿ ಮುಳುಗಿ ಯುವಕರಿಬ್ಬರ ಸಾವು
ಘಟನೆಯಲ್ಲಿ ಅಭಿಷೇಕ್(15) ಹಾಗೂ ಕುಮಾರ್(27) ಸಾವಿಗೀಡಾದ ಯುವಕರಾಗಿದ್ದಾರೆ. ಇಂದು ಮಧ್ಯಾಹ್ನ ಅಭಿಷೇಕ್ ಹಸು ತೊಳೆಯಲು ಕೆರೆಗೆ ಹೋದಾಗ ನೀರಿನಲ್ಲಿ ಆಯತಪ್ಪಿ ಬಿದ್ದು ಮುಳುಗಿದ್ದಾನೆ. ಇದನ್ನು ನೋಡಿದ ಕುಮಾರ್ ಆತನ ರಕ್ಷಣೆಗೆ ದಾವಿಸಿದಾಗ ಅವನೂ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಕಿಕ್ಕೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
TAGGED:
kr pete youth death