ಮಂಡ್ಯ:ಅನಾರೋಗ್ಯದಿಂದ ಕುರಿಗಳು ಸಾವನ್ನಪ್ಪಿದ ಘಟನೆ ಮಳವಳ್ಳಿ ತಾಲೂಕಿನ ದ್ಯಾವಪಟ್ಟಣದಲ್ಲಿ ನಡೆದಿದ್ದು, ಕುರಿಗಳ ಸಾವಿನಿಂದ ರೈತ ಕುಟುಂಬದಲ್ಲಿ ಆತಂಕ ಮನೆ ಮಾಡಿದೆ.
ಅನಾರೋಗ್ಯದಿಂದ ಕುರಿಗಳ ಸಾವು: ಆತಂಕದಲ್ಲಿ ರೈತ ಕುಟುಂಬ - undefined
ಗಣೇಶ್ ಎಂಬ ರೈತನಿಗೆ ಸೇರಿದ 6 ಕುರಿಗಳು ಅನಾರೋಗ್ಯದಿಂದ ಕುರಿಗಳ ಸರಣಿ ಸಾವಿನಿಂದ ಕುರಿಗಾಹಿ ಕುಟುಂಬ ಕಂಗಾಲಾಗಿದೆ.
ಅನಾರೋಗ್ಯದಿಂದ ಕುರಿಗಳ ಸಾವು
ಗಣೇಶ್ ಎಂಬ ರೈತನಿಗೆ ಸೇರಿದ 6 ಕುರಿಗಳು ಸಾವಿಗೀಡಾಗಿದ್ದು, ಕುರಿಗಳ ಸರಣಿ ಸಾವಿನಿಂದ ಕುರಿಗಾಹಿ ಕುಟುಂಬ ಕಂಗಾಲಾಗಿದೆ. ರಾತ್ರಿಯಿಂದ ಜೊಲ್ಲು ಸುರಿಸಿಕೊಂಡು 6 ಕುರಿಗಳು ಸಾವಿಗೀಡಾಗಿದ್ದು, ಮತ್ತಷ್ಟು ಕುರಿಗಳು ರೋಗಕ್ಕೆ ತುತ್ತಾಗಿವೆ.
ತಮ್ಮ ಉಳಿದ ಕುರಿಗಳನ್ನು ಉಳಿಸಿಕೊಡಿ ಎಂದು ಪಶು ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಪರಿಹಾರಕ್ಕೆ ಒತ್ತಾಯ ಮಾಡಿದ್ದಾರೆ. ಸ್ಥಳಕ್ಕೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿದ್ದಾರೆ.