ಮಂಡ್ಯ: ರಾಜಕೀಯ ನಾಯಕರಿಂದ ಜೋಡೆತ್ತು ಎಂದು ಟೀಕಿಸಿಕೊಂಡಿದ್ದ ಯಶ್ ಹಾಗೂ ದರ್ಶನ್ ಎತ್ತಿನ ಗಾಡಿ ಓಡಿಸುವ ಮೂಲಕ ರೈತರ, ಮತದಾರರ ಗಮನ ಸೆಳೆದರು.
ಮಂಡ್ಯದ ಇಂಡುವಾಳು ಗ್ರಾಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮದ್ದೂರು ತಾಲೂಕಿನ ಅಬಲವಾಡಿ ಗ್ರಾಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಎತ್ತಿನ ಗಾಡಿ ಓಡಿಸಿ ಸುಮಲತಾ ಅಂಬರೀಶ್ ಪರ ಮತಯಾಚನೆ ಮಾಡಿದರು. ಅಲ್ಲದೇ ಈ ಮೂಲಕ ಜೋಡೆತ್ತು ಎಂದು ಕರೆದಿದ್ದ ಟೀಕಾಕಾರರಿಗೆ ಉತ್ತರ ನೀಡಿದರು.