ಕರ್ನಾಟಕ

karnataka

ETV Bharat / state

ಅಂಬೇಡ್ಕರ್ ನಾಮಫಲಕ ಧ್ವಂಸ....ಕಿರುಗಾವಲು ಗ್ರಾಮದಲ್ಲಿ ದಲಿತರ ಪ್ರತಿಭಟನೆ! - mandya protest latest news

ಕಿಡಿಗೇಡಿಗಳಿಂದ ಅಂಬೇಡ್ಕರ್ ನಾಮಫಲಕ ಧ್ವಂಸಗೊಂಡ ಹಿನ್ನೆಲೆ, ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ದಲಿತರು ಪ್ರತಿಭಟನೆ ನಡೆಸಿದ್ದು, ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ ಮಾಡಿದ್ದಾರೆ.

Dalit protest in Kirugavalu village!
ಅಂಬೇಡ್ಕರ್ ನಾಮಫಲಕ ಧ್ವಂಸ....ಕಿರುಗಾವಲು ಗ್ರಾಮದಲ್ಲಿ ಪ್ರತಿಭಟನೆ!

By

Published : Feb 11, 2020, 12:56 PM IST

ಮಂಡ್ಯ: ಕಿಡಿಗೇಡಿಗಳಿಂದ ಅಂಬೇಡ್ಕರ್ ನಾಮಫಲಕ ಧ್ವಂಸಗೊಂಡ ಹಿನ್ನೆಲೆ, ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ದಲಿತರು ಪ್ರತಿಭಟನೆ ನಡೆಸಿದ್ದಾರೆ.

ಮಧ್ಯರಾತ್ರಿ ಗ್ರಾಮದ ರಸ್ತೆ ಪಕ್ಕದಲ್ಲಿದ್ದ ಅಂಬೇಡ್ಕರ್ ನಾಮಫಲಕ ಧ್ವಂಸ ಮಾಡಿರೋದರಿಂದ ರೊಚ್ಚಿಗೆದ್ದ ದಲಿತ ಮುಖಂಡರು, ರಸ್ತೆ‌ಮಧ್ಯೆ ಟೈರ್​ಗೆ ಬೆಂಕಿ ಹಚ್ಚಿ ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿದ್ದರು.

ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಸದ್ಯ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಲಾಗಿದೆ.

ABOUT THE AUTHOR

...view details