ಕರ್ನಾಟಕ

karnataka

ETV Bharat / state

ಸಂಸದೆ ಸುಮಲತಾ ಅವರಿಂದ ಸರ್ಟಿಫಿಕೇಟ್ ಪಡೆಯೋ ಅಗತ್ಯ ಇಲ್ಲ.. ಶಾಸಕ ಡಿ ಸಿ ತಮ್ಮಣ್ಣ - no Certificate required form Sumalatha

ಶಾಸಕ ಡಿ ಸಿ ತಮ್ಮಣ್ಣ ಮತ್ತು ಸಂಸದೆ ಸುಮಲತಾ ಅಂಬರೀಶ್‌ ಅವರ ನಡುವಿನ ಮಾತಿನ ಸಮರ ಮುಂದುವರೆದಿದೆ. ಅಭಿವೃದ್ಧಿ ಕುರಿತಂತೆ ಬಹಿರಂಗ ಚರ್ಚೆ ಮಾಡೋಣ ಅಂತಾ ಮಂಡ್ಯದಲ್ಲಿಂದು ತಮ್ಮಣ್ಣ ಅವರು ಸಂಸದೆಗೆ ಆಹ್ವಾನ ನೀಡಿದರು..

d c Tammanna
ಶಾಸಕ ಡಿ.ಸಿ. ತಮ್ಮಣ್ಣ

By

Published : Mar 27, 2022, 5:01 PM IST

ಮಂಡ್ಯ :ಬೇರೆಯವರ ಬಳಿ ಸರ್ಟಿಫಿಕೇಟ್ ಪಡೆಯೋ ಅಗತ್ಯ ನಮಗೆ ಇಲ್ಲ. ನಮ್ಮ ಕ್ಷೇತ್ರದ ಜನರ ಕೆಲಸ ಮಾಡಲು ನಮ್ಮನ್ನು ಆಯ್ಕೆ ಮಾಡಿರುವುದು. ನಮ್ಮ ಕ್ಷೇತ್ರದ ಜನ ಏನು ಹೇಳ್ತಾರೋ ಅದು ನಮಗೆ ಇಂಪಾರ್ಟೆಂಟ್. ಇನ್ನೊಬ್ಬರ ಬಳಿ ಸರ್ಟಿಫಿಕೇಟ್ ಪಡೆಯೋ ಅವಶ್ಯಕತೆ ಇಲ್ಲ ಅಂತಾಮದ್ದೂರಿನ ಶಾಸಕ ಡಿ ಸಿ ತಮ್ಮಣ್ಣ ಹೇಳುವ ಮೂಲಕ ಸಂಸದೆ ಸುಮಾಲತಾ ಅಂಬರೀಶ್‌ ಅವರಿಗೆ ಟಾಂಗ್ ನೀಡಿದರು.

ಸಂಸದೆ ಸುಮಲತಾ ಅವರಿಂದ ಸರ್ಟಿಫಿಕೇಟ್ ಪಡೆಯೋ ಅಗತ್ಯ ಇಲ್ಲ ಅಂತಾ ಶಾಸಕ ಡಿ ಸಿ ತಮ್ಮಣ್ಣ ಹೇಳಿರುವುದು..

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜನರು ನಮ್ಮ ಹತ್ತಿರ ಬರಲಿ, ಅವರ ಹತ್ತಿರ ಹೋದರೆ ಏನಾಗುತ್ತೆ. ಜನರ ಕೆಲಸ ಮಾಡಲು ನಾವು ಆಯ್ಕೆಯಾಗಿರುವುದು. ನಾವು ಕೆಲಸ ಮಾಡುತ್ತೇವೆ ಅವರೂ ಮಾಡಲಿ. ಜನರ ಕಷ್ಟ ಬಗೆಹರಿಸುವ ಹಾಗಿದ್ರೆ ಬಗೆಹರಿಸಲಿ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಓಪನ್ ಚಾಲೆಂಜ್​ಗೆ ಬರಲಿ, ಚರ್ಚೆ ಮಾಡೋಣ. ಯಾವಾಗ ಬೇಕಾದರೂ ಬರಲಿ ನಾವು ರೆಡಿ ಎಂದರು.

ಇದನ್ನೂ ಓದಿ:ಸಿದ್ದರಾಮಯ್ಯ ಕಾಂಗ್ರೆಸ್​ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ: ಕೆ.ಎಸ್​. ಈಶ್ವರಪ್ಪ

ABOUT THE AUTHOR

...view details