ಮಂಡ್ಯ: ಕೊಟ್ಟಿಗೆಯಲ್ಲಿದ್ದ ದನ ಕರುಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚಂದಗಾಲು ಗ್ರಾಮದಲ್ಲಿ ನಡೆದಿದೆ.
ಕೊಟ್ಟಿಗೆಯಲ್ಲಿದ್ದ ರಾಸುಗಳು ನಿಗೂಢವಾಗಿ ಸಾವು: ಬೆಚ್ಚಿಬಿದ್ದ ರೈತ, ಆಕ್ರಂದನ - ರೈತ ಕುಟುಂಬ ಕಂಗಾಲು
ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 3 ಹಸುಗಳು ಸೇರಿ 2 ಟಗರುಗಳು ಮೃತಪಟ್ಟಿದ್ದು, ಹಸುಗಳು ನಿಗೂಢ ಸಾವಿಗೆ ರೈತನ ಆಕ್ರಂದನ ಮುಗಿಲು ಮುಟ್ಟಿದೆ.
death
ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 3 ಹಸುಗಳು ಸೇರಿ 2 ಟಗರುಗಳು ಮೃತಪಟ್ಟಿವೆ. ನಾರಾಯಣ ಎಂಬುವರಿಗೆ ಸೇರಿದ ಸುಮಾರು 1.5 ಲಕ್ಷ ಬೆಲೆಯ ರಾಸುಗಳಾಗಿದ್ದು, ರಾತ್ರಿ ಹಸುಗಳನ್ನು ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಮೇಯಲು ಹುಲ್ಲು ಹಾಕಿದ್ದರು. ಮುಂಜಾನೆ ಹಾಲು ಕರೆಯಲು ಕೊಟ್ಟಿಗೆಗೆ ಹೋದಾಗ ನಿಗೂಢವಾಗಿ ರಾಸುಗಳು ಮೃತಪಟ್ಟಿವೆ.
ರೈತ ಕುಟುಂಬ ರಾಸುಗಳ ಸಾವು ಕಂಡು ಕಂಗಾಲಾಗಿದ್ದು, ಹಸುಗಳು ನಿಗೂಢ ಸಾವಿನಿಂದ ರೈತನ ಆಕ್ರಂದನ ಮುಗಿಲು ಮುಟ್ಟಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
Last Updated : Jan 11, 2021, 10:39 AM IST