ಮಂಡ್ಯ: ಕೊರೊನಾ ವಾರ್ಡ್ನಲ್ಲೇ ಮೃತರ ಶವಗಳನ್ನಿರಿಸಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದ್ದು, ಇತರ ಸೋಂಕಿತರು ಭಯ ಭೀತರಾಗಿದ್ದಾರೆ.
ಮೃತದೇಹಗಳ ನಡುವೆಯೇ ಸೋಂಕಿತರಿಗೆ ಚಿಕಿತ್ಸೆ ಕೋವಿಡ್ ಸೋಂಕಿತರಿಗೆ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಆ ಚಿಕಿತ್ಸೆ ಫಲಕಾರಿಯಾಗದೆ ವಾರ್ಡ್ನಲ್ಲಿಯೇ ಸಾವಿಗೀಡಾಗಿದ್ದ ಇಬ್ಬರ ಶವಗಳನ್ನ ಹಲವು ಗಂಟೆಗಳ ಕಾಲ ವಾರ್ಡ್ನಲ್ಲೇ ಇರಿಸಿದ್ದು, ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ ಆತಂಕ ಮನೆ ಮಾಡಿದೆ.
ಇದನ್ನೂ ಓದಿ:ಒಂದೇ ಗ್ರಾಮದ 185 ಜನರಿಗೆ ಕೊರೊನಾ ದೃಢ.. ಕಾಶಿಯಿಂದ ಮರಳಿದವರು ಕೊಡಗಹಳ್ಳಿಗೆ ಕೋವಿಡ್ ತಂದ್ರಾ!?
ಶವಗಳ ನಡುವೆಯೇ ವಾರ್ಡ್‌ನಲ್ಲಿದ್ದ ಸೋಂಕಿತರು ವಾಸಿಸುವಂತಾಗಿದೆ. ಭಯದಿಂದ ಸೋಂಕಿತರು ಆಸ್ಪತ್ರೆಯಿಂದ ಬೇರೆ ಕಡೆ ಶಿಫ್ಟ್ ಮಾಡುವಂತೆ ಒತ್ತಾಯಿಸಿದ್ದಾರೆ.
ಅಲ್ಲದೇ ಸೋಂಕಿತರು ಮರಣ ಹೊಂದಿದ ಕೂಡಲೇ ಶವ ಬೇರೆಡೆಗೆ ಸಾಗಿಸುವಂತೆ ತಾಲೂಕು ಆಡಳಿತಕ್ಕೆ ಕೋವಿಡ್ ಸೋಂಕಿತರು ಮನವಿ ಮಾಡಿದ್ದಾರೆ.