ಮಂಡ್ಯ: ಪತ್ನಿಯ ನಿಧನದ ಸುದ್ದಿ ಕೇಳಿ ಕೊರೊನಾ ಸೋಂಕಿತ ಪತಿ ಕೂಡ ಆಘಾತಗೊಂಡು ಸಾವನ್ನಪ್ಪಿರುವ ಮನಕಲಕುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.
ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಪತ್ನಿ, ಪತ್ನಿ ಸಾವಿನಲ್ಲೂ ಒಂದಾಗಿದ್ದಾರೆ. ಪತ್ನಿ ಮೃತರಾದ ಕೆಲವೇ ಗಂಟೆಗಳಲ್ಲಿ ಪತಿಯೂ ಮೃತಪಟ್ಟಿದ್ದಾರೆ. ಜಿಲ್ಲಾ ರೈತ ಸಂಘದ ಹಿರಿಯ ಮುಖಂಡ ಸಿ.ಚಾಮುಂಡಪ್ಪ (74) ಹಾಗೂ ಇವರ ಪತ್ನಿ ಜಯಮ್ಮ (62) ಮೃತ ದಂಪತಿ.