ಮಂಡ್ಯ: ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಐತಿಹಾಸಿಕ ವೈರಮುಡಿ ಉತ್ಸವ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐತಿಹಾಸಿಕ ವೈರಮುಡಿ ಉತ್ಸವ ಮುಂದೂಡಿಕೆ - kovid 19
ಮಾರ್ಚ್ 18ರಿಂದ ಏಪ್ರಿಲ್ 9ರವರೆಗೆ ಜಿಲ್ಲೆಯಲ್ಲಿ ನಡೆಯಬೇಕಿದ್ದ ವೈರಮುಡಿ ಬ್ರಹ್ಮೋತ್ಸವವನ್ನು ಮುಂದಿನ ಆದೇಶದ ವರೆಗೂ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊರೊನಾ ಭೀತಿ: ಐತಿಹಾಸಿಕ ವೈರಮುಡಿ ಉತ್ಸವ ಮುಂದೂಡಿಕೆ
ಮಾರ್ಚ್ 18ರಿಂದ ಏಪ್ರಿಲ್ 9ರವರೆಗೆ ನಡೆಯಬೇಕಿದ್ದ ಆಚರಣೆ ಸೇರಿದಂತೆ ಏಪ್ರಿಲ್ 2ರಂದು ನಡೆಯಬೇಕಿದ್ದ ವೈರಮುಡಿ ಬ್ರಹ್ಮೋತ್ಸವವನ್ನು ಮುಂದಿನ ಆದೇಶದವರೆಗೂ ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.
ವೈರಮುಡಿ ಉತ್ಸವಕ್ಕೆ ದೇಶ ವಿದೇಶ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದರು. ಕೊರೊನಾ ಹಾವಳಿ ಕಾರಣ ಈ ಹಿನ್ನಲೆಯಲ್ಲಿ ಸ್ಥಳೀಯರು ಉತ್ಸವ ಮುಂದೂಡುವಂತೆ ಮನವಿ ಮಾಡಿದ್ದರು. ಸ್ಥಳೀಯರ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ ಈ ಹಿಂದೆ ಮಾಡಿದ್ದ ಸಾಂಕೇತಿಕವಾಗಿ ಆಚರಣೆಯ ಕುರಿತ ಆದೇಶವನ್ನು ವಾಪಸ್ ಪಡೆದು ಉತ್ಸವ ಮುಂದೂಡಿದೆ.