ಮಂಡ್ಯ:ಜಿಲ್ಲೆಯಲ್ಲಿ ಮಂಗಳವಾರ 737 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 27,240ಕ್ಕೆ ಏರಿಕೆಯಾಗಿದೆ.
ಸೋಂಕು ಪತ್ತೆ ಎಲ್ಲೆಲ್ಲಿ?
ಮಂಡ್ಯ:ಜಿಲ್ಲೆಯಲ್ಲಿ ಮಂಗಳವಾರ 737 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 27,240ಕ್ಕೆ ಏರಿಕೆಯಾಗಿದೆ.
ಸೋಂಕು ಪತ್ತೆ ಎಲ್ಲೆಲ್ಲಿ?
ಮಂಡ್ಯದಲ್ಲಿ 277, ಮದ್ದೂರು 107, ಮಳವಳ್ಳಿ 68, ಪಾಂಡವಪುರ 65, ಶ್ರೀರಂಗಪಟ್ಟಣ 71, ಕೆ.ಆರ್.ಪೇಟೆ 27, ನಾಗಮಂಗಲ 107 ಹಾಗೂ ಹೊರ ಜಿಲ್ಲೆಯ 15 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 4,441ಇದೆ.
ನಿನ್ನೆ 435 ಜನರು ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 22,604 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ಅನ್ಯಕಾರಣದಿಂದ ಇಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 193 ಜನರು ಕೊರೊನಾಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ:ಕೊರೊನಾ ಸೋಲಿಸಿದ 105ರ ಅಜ್ಜ, 95ರ ಅಜ್ಜಿ !