ಮಂಡ್ಯ: ಜಿಲ್ಲೆಯ ಪಾಂಡಪುರ ತಾಲೂಕಿನ ಎರೇಗೌಡನಕೊಪ್ಪಲು ಗ್ರಾಮದ 25 ಮಂದಿಗೆ ಒಂದೇ ದಿನ ಕೊರೊನಾ ಸೋಂಕು ದೃಢಪಟ್ಟಿದೆ.
ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮದ 30 ಮಂದಿ ಸ್ಥಳೀಯ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದರು. ಇಂದು ಅವರ ವರದಿ ಬಂದಿದ್ದು, 25 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
ಸ್ಥಳಕ್ಕೆ ಶಾಸಕ ಪುಟ್ಟರಾಜು ಭೇಟಿ ಸುಮಾರು 500 ಮಂದಿ ಇರುವ ಎರೇಗೌಡನಕೊಪ್ಪಲು ಗ್ರಾಮದಲ್ಲಿ ಒಂದೇ ದಿನ 25 ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಈ ಬಗ್ಗೆ ಮಾಹಿತಿ ತಿಳಿದ ಶಾಸಕ ಪುಟ್ಟರಾಜು ಹಾಗೂ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ, ಯಾರು ಕೂಡ ಭಯ ಪಡಬೇಡಿ. ಎಲ್ಲರೂ ಮನೆಯಲ್ಲಿ ಇರಿ, ಕೊರೊನಾ ನಿಯಮಗಳನ್ನು ಪಾಲಿಸಿ. ಪಾಸಿಟಿವ್ ಬಂದಿರುವವರಿಗೆ ಸೂಕ್ತ ಚಿಕಿತ್ಸೆ ನೀಡುತ್ತೇವೆ ಎಂದು ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ:ವಿಶ್ವನಾಥನ್ ಆನಂದ್ ಜೊತೆ ಚೆಸ್ ಆಡಲಿದ್ದಾರೆ ಕಿಚ್ಚ!