ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ: ಹೆದ್ದಾರಿ ಕಾಮಗಾರಿಗೆ ಹೊರರಾಜ್ಯದ ಕಾರ್ಮಿಕರ ಆಗಮನ, ಗ್ರಾಮಸ್ಥರ ಆಕ್ರೋಶ - ಹೆದ್ದಾರಿ ಕಾಮಗಾರಿಗಾಗಿ ಮಹಾರಾಷ್ಟ್ರದ ಕಾರ್ಮಿಕರು

ಹೆದ್ದಾರಿ ಕಾಮಗಾರಿಗಾಗಿ ನಡೆಸುವ ಕಲ್ಲು ಕ್ವಾರೆಗೆ ಹೊರ ರಾಜ್ಯದ ಕಾರ್ಮಿಕರನ್ನು ಕರೆತಂದ ಹಿನ್ನೆಲೆ ಗ್ರಾಮಸ್ಥರು ಗಣಿಗಾರಿಕೆ ಪ್ರದೇಶಕ್ಕೆ ತೆರಳಿ ಪ್ರತಿಭಟನೆ ಮಾಡಿದ ಘಟನೆ ಮದ್ದೂರು ತಾಲೂಕಿನ ರಾಜೇಗೌಡನ ದೊಡ್ಡಿ ಗ್ರಾಮದ ಬಳಿ ನಡೆದಿದೆ.

corona-panic-foreign-workers-arriving-on-highway-villagers-outrage
ಕೊರೊನಾ ಭೀತಿ: ಹೆದ್ದಾರಿ ಕಾಮಗಾರಿಗೆ ಹೊರರಾಜ್ಯದ ಕಾರ್ಮಿಕರ ಆಗಮನ, ಗ್ರಾಮಸ್ಥರ ಆಕ್ರೋಶ…!

By

Published : Apr 15, 2020, 7:45 PM IST

ಮಂಡ್ಯ: ಹೆದ್ದಾರಿ ಕಾಮಗಾರಿಗಾಗಿ ನಡೆಸುವ ಕಲ್ಲು ಕ್ವಾರೆಗೆ ಹೊರ ರಾಜ್ಯದ ಕಾರ್ಮಿಕರನ್ನು ಕರೆತಂದ ಹಿನ್ನೆಲೆ ಗ್ರಾಮಸ್ಥರು ಗಣಿಗಾರಿಕೆ ಪ್ರದೇಶಕ್ಕೆ ತೆರಳಿ ಪ್ರತಿಭಟನೆ ಮಾಡಿದ ಘಟನೆ ಮದ್ದೂರು ತಾಲೂಕಿನ ರಾಜೇಗೌಡನ ದೊಡ್ಡಿ ಗ್ರಾಮದ ಬಳಿ ನಡೆದಿದೆ.

ಕೊರೊನಾ ಭೀತಿ: ಹೆದ್ದಾರಿ ಕಾಮಗಾರಿಗೆ ಹೊರರಾಜ್ಯದ ಕಾರ್ಮಿಕರ ಆಗಮನ, ಗ್ರಾಮಸ್ಥರ ಆಕ್ರೋಶ

ಹೆದ್ದಾರಿ ಕಾಮಗಾರಿಗಾಗಿ ಮಹಾರಾಷ್ಟ್ರದಿಂದ ಕಾರ್ಮಿಕರನ್ನು ಕರೆತರಲಾಗಿದೆ. ಇದರಿಂದ ಕೊರೊನಾ ಭೀತಿ ಮತ್ತಷ್ಟು ಹೆಚ್ಚಿದ್ದು, ಗುತ್ತಿಗೆದಾರರಿಗೆ ಹೊರ ರಾಜ್ಯದ ಕಾರ್ಮಿಕರನ್ನು ರಾಜ್ಯದಿಂದ ಹೊರಗೆ ಕಳುಹಿಸುವಂತೆ ಸೂಚನೆ ನೀಡಿ ಎಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ.

ಸ್ಥಳಕ್ಕೆ ಪೊಲೀಸರು ಹಾಗೂ ಗ್ರಾಮ ಪಂಚಾಯತ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಜೊತೆಗೆ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದರು. ಅಲ್ಲದೆ, ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕರೆತಂದಿರುವ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡುವ ಭರವಸೆಯನ್ನು ನೀಡಿದ್ದಾರೆ.

ABOUT THE AUTHOR

...view details