ಕರ್ನಾಟಕ

karnataka

ETV Bharat / state

ಮಂಡ್ಯ ಜಿಲ್ಲೆಯ ಈ ಊರಲ್ಲಿ 25 ಜನರಿಗೆ ಸೋಂಕು ದೃಢ : ಗ್ರಾಮಕ್ಕೇ ದಿಗ್ಬಂಧನ - Corona increase in Pandavapura

ಕೋಡಾಲ ಗ್ರಾಮದ ಸುಮಾರು 25ಕ್ಕೂ ಹೆಚ್ಚಿನ ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಮುಂದಿನ 14 ದಿನಗಳ ಕಾಲ ಗ್ರಾಮದಿಂದ ಯಾರೂ ಹೊರಗೆ ಹೋಗದಂತೆ ತಾಲೂಕು ಅಧಿಕಾರಿಗಳು ದಿಗ್ಬಂಧನ ಹಾಕಿದ್ದಾರೆ.

corona
ಕೊರೊನಾ

By

Published : Apr 29, 2021, 8:47 PM IST

ಮಂಡ್ಯ: ಒಂದೇ ಗ್ರಾಮದ 25ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ ತಾಲೂಕು ಆಡಳಿತ ಪಾಂಡವಪುರ ತಾಲೂಕಿನ ಕೋಡಾಲ ಗ್ರಾಮಕ್ಕೆ ದಿಗ್ಬಂಧನ ಹಾಕಲಾಗಿದೆ.

ಗ್ರಾಮವನ್ನು ಕಂಟೈನ್​ಮೆಂಟ್​ ಝೋನ್​ ಎಂದು ಘೋಷಿಸಿರುವುದು

ಕೋಡಾಲ ಗ್ರಾಮದ ಸುಮಾರು 25ಕ್ಕೂ ಹೆಚ್ಚಿನ ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಮುಂದಿನ 14 ದಿನಗಳ ಕಾಲ ಗ್ರಾಮದಿಂದ ಯಾರೂ ಹೊರಗೆ ಹೋಗದಂತೆ ತಾಲೂಕು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಅಲ್ಲದೆ, ಗ್ರಾಮಕ್ಕೆ ಹೊರಗಿನಿಂದ ಯಾರೂ ಬರದಂತೆ ಗ್ರಾಮವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ತಾಲೂಕು ಆಡಳಿತ ಆದೇಶಿಸಿದೆ. ಸದ್ಯ ಗ್ರಾಮದ ಪ್ರತಿಯೊಬ್ಬರಿಗೂ ಕೋವಿಡ್ ಟೆಸ್ಟ್ ಮಾಡಿಸುವಂತೆ ಸೂಚನೆ ನೀಡಲಾಗಿದೆ.

ಗ್ರಾಮವನ್ನು ಕಂಟೈನ್​ಮೆಂಟ್​ ಝೋನ್​ ಎಂದು ಘೋಷಿಸಿರುವುದು

ಈ ಊರಲ್ಲಿ ಇನ್ನೂ ಹಲವರಿಗೆ ಕೋವಿಡ್​-19 ಸೋಂಕು ಇರುವ ಶಂಕೆ ವ್ಯಕ್ತವಾಗಿರುವ ಕಾರಣ ತಪಾಸಣೆಗೆ ಒಳಗಾಗುವಂತೆ ಹೇಳಲಾಗಿದೆ. ಇದಕ್ಕೆ ಗ್ರಾಮಸ್ಥರು ನಿರಾಕರಿಸಿದ ಹಿನ್ನೆಲೆ ಇಡೀ ಗ್ರಾಮಕ್ಕೆ ದಿಗ್ಬಂಧನ ಹಾಕಲಾಗಿದೆ.

ಓದಿ:18 ರಿಂದ 45 ವರ್ಷದೊಳಗಿನವರಿಗಾಗಿ ಹಂತ ಹಂತವಾಗಿ ಲಸಿಕೆ ಅಭಿಯಾನ; ಸಿಎಂ ಬಿಎಸ್​ವೈ

ABOUT THE AUTHOR

...view details