ಕರ್ನಾಟಕ

karnataka

ETV Bharat / state

ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ ಕೊರೊನಾ ಗೆಲ್ಲೋಣ ಗೀತೆ - corona in mandya

ಮಂಡ್ಯದಲ್ಲಿ ‘ಕೊರೊನಾ ಗೆಲ್ಲೋಣ’ ಗೀತೆ ಜೂನ್‌ 11ರಂದು ಬಿಡುಗಡೆಯಾಗಿದೆ. 10 ದಿನಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ಒಂದು ತಿಂಗಳ ಮೊದಲು ಬಿಡುಗಡೆಯಾಗಿದ್ದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಜನರ ಗಮನ ಸೆಳೆಯುತ್ತಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯ..

corona-gellona-song-good-view
ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ ಕೊರೊನಾ ಗೆಲ್ಲೋಣ ಗೀತೆ

By

Published : Jun 21, 2021, 7:10 PM IST

ಮಂಡ್ಯ :ಹೊಂಬಾಳೆ ಫಿಲಂಸ್‌ ಸಹಯೋಗದಲ್ಲಿ ಜಿಲ್ಲಾಡಳಿತ ನಿರ್ಮಿಸಿರುವ ‘ಕೊರೊನಾ ಗೆಲ್ಲೋಣ’ ಜನ ಜಾಗೃತಿ ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸೋಂಕು ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಕೈಗೊಂಡಿರುವ ಹಾಡು ಎಲ್ಲೆಡೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೋಮಶೇಖರ್‌ ಎಸ್‌.ಜಿಗಣಿ ಸಾಹಿತ್ಯ ಬರೆದು, ರಾಗ ಸಂಯೋಜಿಸಿ ನಿರ್ದೇಶಿಸಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕರು, ಪೊಲೀಸರು ಹಾಗೂ ಇತರ ಸಿಬ್ಬಂದಿ ಸೇವೆಯ ಮಹತ್ವ ಸಾರುತ್ತಲೇ ಜನರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗೀತೆಯಲ್ಲಿ ಅರಿವು ಮೂಡಿಸಲಾಗಿದೆ. ಆಸ್ಪತ್ರೆಗಳು, ವಿವಿಧ ಕೋವಿಡ್‌ ಕೇರ್‌ ಕೇಂದ್ರಗಳ ಚಿತ್ರಣವನ್ನು ವಿಡಿಯೋದಲ್ಲಿ ಬಳಸಿಕೊಳ್ಳಲಾಗಿದೆ.

ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ ಕೊರೊನಾ ಗೆಲ್ಲೋಣ ಗೀತೆ
ಕೆಜಿಎಫ್‌ ಚಿತ್ರದ ನಿರ್ಮಾಪಕರೂ ಆಗಿರುವ ಹೊಂಬಾಳೆ ಫಿಲಂಸ್‌ ಮುಖ್ಯಸ್ಥ ವಿಜಯ್‌ ಕಿರಗಂದೂರು ತಮ್ಮ ತವರು ಜಿಲ್ಲೆಯಲ್ಲಿ ಜಾಗೃತಿ ಗೀತೆ ನಿರ್ಮಾಣ ಮಾಡುವ ಮೂಲಕ ಇಡೀ ರಾಜ್ಯಕ್ಕೆ ಸಂದೇಶ ನೀಡಿದ್ದಾರೆ. ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳ ಸೇವೆಯನ್ನು ಗೀತೆಯಲ್ಲಿ ವರ್ಣಿಸಲಾಗಿದೆ. ಕೋವಿಡ್‌ ನಿರ್ವಹಣೆ‌ಯಲ್ಲಿ ನೆರವು ನೀಡಿದ ಹಲವು ಸಂಘ–ಸಂಸ್ಥೆಗಳ ಸೇವೆಯನ್ನು ಸ್ಮರಿಸಲಾಗಿದೆ.

ಗೀತೆಯಲ್ಲಿ ಪ್ರಖ್ಯಾತ ಗಾಯಕರು ಜಾಗೃತಿ ಗೀತೆಗೆ ಧ್ವನಿಯಾಗಿರುವುದು ವಿಶೇಷ. ಹಿನ್ನೆಲೆ ಗಾಯಕರಾದ ರಘು ದೀಕ್ಷಿತ್‌, ರಾಜೇಶ್‌ ಕೃಷ್ಣನ್‌, ಅಲೋಕ್‌, ನವೀನ್‌ ಸಜ್ಜು, ಎಂ ಡಿ ಪಲ್ಲವಿ, ಸುನೀತಾ, ಅನನ್ಯಾ ಭಟ್‌ ಮನದುಂಬಿ ಹಾಡಿದ್ದಾರೆ. ‘ಕೊರೊನಾ ಕೊರೊನಾ ಎಲ್ಲಾ ಸೇರಿ ಗೆಲ್ಲೋಣ, ನಿಯಮಗಳ ಪಾಲಿಸುತ ಮೃತ್ಯುಂಜಯರಾಗೋಣ’ ಎಂಬ ಸಾಲಿನಿಂದ ಆರಂಭವಾಗುವ ಗೀತೆ ಎಲ್ಲರ ಗಮನ ಸೆಳೆಯುತ್ತದೆ.

ಓದಿ:ಪತ್ನಿ ರೇವತಿ ಕಡೆಯಿಂದ ನಿಖಿಲ್ ಕುಮಾರಸ್ವಾಮಿಗೆ ಸಿಕ್ತು ಗುಡ್ ನ್ಯೂಸ್!

ABOUT THE AUTHOR

...view details