ಕರ್ನಾಟಕ

karnataka

ETV Bharat / state

ಕೊಡಿಯಾಲ ಸೀರೆ ಉದ್ಯಮಕ್ಕೆ ಕಂಟಕವಾದ ಕೊರೊನಾ! - ಜವಳಿ ಉದ್ಯಮ

ಮೈಸೂರು ಮಹಾರಾಜರ ದೂರ ದೃಷ್ಟಿಯಿಂದ ಆರಂಭಗೊಂಡ ಜವಳಿ ಉದ್ಯಮ ಉತ್ತುಂಗಕ್ಕೆ ಏರುವ ಸಮಯದಲ್ಲಿ ಕೊರೊನಾ ಸಂಕಷ್ಟ ತಂದಿದೆ. ಇದರಿಂದ ಅದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವವರ ಬದುಕು ಬೀದಿಗೆ ಬಂದಿದೆ.

Corona effect on kodiyala saree industry
ಕೊಡಿಯಾಲ ಸೀರೆ ಉದ್ಯಮಕ್ಕೆ ಪೆಟ್ಟು

By

Published : Sep 20, 2020, 6:02 AM IST

ಮಂಡ್ಯ: ಸಾಮಾನ್ಯವಾಗಿ ಸೀರೆಗಳಲ್ಲಿ ಕಂಚಿ ಸೀರೆ ಕೇಳಿದ್ದೀರಿ, ಇಷ್ಟನೂ ಪಡ್ತೀರಿ. ಆದರೆ, ಮೈಸೂರು ಮಹಾರಾಜರು ಸ್ಥಳೀಯ ರೈತರ ಹಿತಕ್ಕಾಗಿ ಆರಂಭ ಮಾಡಿದ ಕೈ ಮಗ್ಗದ ಬಗ್ಗೆ ನಿಮಗೆ ಗೊತ್ತಾ?. ಮೈಸೂರು ಪ್ರಾಂತ್ಯದಲ್ಲಿ ಕೊಡಿಯಾಲ ಸೀರೆ ಎಂದರೆ ಬಹಳ ಪ್ರಸಿದ್ಧಿ. ಮೈಸೂರು ಅರಸರ ಆಳ್ವಿಕೆಯಲ್ಲಿ ರೇಷ್ಮೆ ರಾಜ್ಯಕ್ಕೆ ಕಾಲಿಟ್ಟ ಗಳಿಗೆಯಲ್ಲಿ ಮಗ್ಗದ ಉದ್ಯಮವೂ ನೆಲೆ ಕಂಡಿತು. ಹಾಗಾದರೆ ಜವಳಿ ಉದ್ಯಮ ಈಗ ಈ ಗ್ರಾಮದಲ್ಲಿ ಹೇಗಿದೆ ಅನ್ನೋದು ಇಲ್ಲಿದೆ ನೋಡಿ.

ಮೈಸೂರು ಅರಸರ ಕಾಲದಲ್ಲಿ ರೇಷ್ಮೆ ಬೆಳೆ ಪರಿಚಯವಾಗಿ ರೈತರು ಬೆಳೆಯಲು ತೊಡಗುತ್ತಿದ್ದಂತೆ ಮಹಾರಾಜರು ಮೊದಲು ಮಾಡಿದ ಕೆಲಸ ಜಿಲ್ಲೆಯ ಐದು ಕಡೆ ಜವಳಿ ಉದ್ಯಮಕ್ಕೆ ಪ್ರೋತ್ಸಾಹ ನೀಡಿದ್ದು ಹೌದು. ಜಿಲ್ಲೆಯ ಕೊಡಿಯಾಲ, ಕಿಕ್ಕೇರಿ, ತಳಗವಾದಿ, ಬೆಳಕವಾಡಿ ಹಾಗೂ ಅಕ್ಕಿ ಹೆಬ್ಬಾಳು ಗ್ರಾಮಕ್ಕೆ ಜವಳಿ ಪರಿಣಿತರನ್ನು ಕರೆತಂದು ಪ್ರೋತ್ಸಾಹ ನೀಡಿದರು‌. ಆದರೆ ಇಂದು ಗಟ್ಟಿಯಾಗಿ ತಳಹೂರಿದ್ದು, ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ ಗ್ರಾಮದ ಉದ್ಯಮಿಗಳು.

ಕೊಡಿಯಾಲ ಗ್ರಾಮದಲ್ಲಿ ಇಂದು 600ಕ್ಕೂ ಹೆಚ್ಚು ಮಗ್ಗಗಳು ಇವೆ. ಯಾಂತ್ರಿಕ ಮಗ್ಗಗಳ ಜೊತೆ ರೇಷ್ಮೆ ನೇಯ್ಗೆಯ ಕೈ ಮಗ್ಗಗಳನ್ನು ಇಲ್ಲಿ ಕಾಣಬಹುದು. ಜವಳಿ ಉದ್ಯಮ ಇಲ್ಲಿ 1,500ಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ನೀಡಿದರೆ, ಪರೋಕ್ಷ ಉದ್ಯೋಗ 10,000 ಸಾವಿರ ದಾಟುತ್ತದೆ. ಇಲ್ಲಿ ತಯಾರು ಮಾಡುವ ಸೀರೆಗಳು ರಾಜ್ಯದ ವಿವಿಧ ಭಾಗಗಳು ಸೇರಿದಂತೆ ಹೊರ ರಾಜ್ಯಕ್ಕೂ ಸರಬರಾಜು ಮಾಡಲಾಗುತ್ತಿದೆ. ತಿಂಗಳಿಗೆ ಕೋಟ್ಯಂತರ ರೂಪಾಯಿ ವ್ಯವಹಾರವೂ ನಡೆಯುತ್ತದೆ. ವಿದೇಶಗಳಿಗೂ ರಫ್ತು ಮಾಡಲು ಮುಂದಾಗಿದ್ದಾರೆ ಇಲ್ಲಿನ ಉದ್ಯಮಿಗಳು.

ಕೊಡಿಯಾಲ ಸೀರೆ ಉದ್ಯಮಕ್ಕೆ ಪೆಟ್ಟು

ಇತಿಹಾಸವನ್ನು ಹೊಂದಿರುವ ಕೊಡಿಯಾಲ ಸೀರೆ ಉದ್ಯಮ ಇಂದು ಸಂಕಷ್ಟಕ್ಕೆ ಒಳಗಾಗಿದೆ. ಕೊರೊನಾ ಉದ್ಯಮಿಗಳ ಕನಸಿಗೆ ತಣ್ಣೀರು ಎರಚಿದರೆ, ಹಲವು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕೊರೊನಾ ಸಂಕಷ್ಟಕ್ಕೆ ಸಿಲುಕಿಸಿದೆ. ಕಚ್ಚಾ ವಸ್ತುಗಳ ಪೂರೈಕೆ ಹಾಗೂ ಸಾರಿಗೆ ವ್ಯವಸ್ಥೆ ಇಲ್ಲದೆ ನಷ್ಟ ಅನುಭವಿಸುವಂತ್ತಾಗಿದೆ. ಸರಳ ಮದುವೆಗಳು ಮತ್ತಷ್ಟು ಆರ್ಥಿಕ ಸಂಕಷ್ಟ ತಂದಿವೆ.

ಮೈಸೂರು ಮಹಾರಾಜರ ದೂರ ದೃಷ್ಟಿಯಿಂದ ಆರಂಭಗೊಂಡ ಜವಳಿ ಉದ್ಯಮ ಉತ್ತುಂಗಕ್ಕೆ ಏರುವ ಸಮಯದಲ್ಲಿ ಕೊರೊನಾ ಸಂಕಷ್ಟ ತಂದಿದೆ. ನೌಕರರಿಗೆ ಪರಿಹಾರ ನೀಡುವ ಭರವಸೆ ನೀಡಿದ ಸರ್ಕಾರ ಇನ್ನೂ ಪರಿಹಾರದ ಪ್ಯಾಕೇಜ್ ನೀಡಿಲ್ಲ. ಇನ್ನಾದರೂ ಸರ್ಕಾರ ಉದ್ಯಮದ ಪ್ರೋತ್ಸಾಹಕ್ಕೆ ಯೋಜನೆ ರೂಪಿಸಬೇಕಾಗಿದೆ.

ABOUT THE AUTHOR

...view details