ಮಂಡ್ಯ:ಮದ್ಯ ಮಾರಾಟ ಕುರಿತು ಅಬಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಅದರಂತೆ ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಈ ಸಾಲಿನಲ್ಲಿ ಶೇ. 50 ರಷ್ಟು ಮಾರಾಟ ಕಡಿಮೆಯಾಗಿದೆ. ಅದರಲ್ಲೂ ಬಿಯರ್ ಮಾರಾಟ ಪಾತಾಳಕ್ಕೆ ಕುಸಿದಿದೆ.
2019ರ ಏಪ್ರಿಲ್‌ನಿಂದ ಜುಲೈ ತಿಂಗಳಲ್ಲಿ ಬಿಯರ್ 2,22,456 ಬಾಕ್ಸ್ ಮಾರಾಟವಾಗಿತ್ತು. ಆದರೆ 2020ರಲ್ಲಿ 1,00,534 ಬಾಕ್ಸ್ ಮಾರಾಟವಾಗಿದೆ. ಅಂದರೆ ಮಾರಾಟದಲ್ಲಿ ಶೇ. 54.81 ರಷ್ಟು ವ್ಯತ್ಯಾಸ ಕಂಡು ಬಂದಿದೆ.
ಮಂಡ್ಯದಲ್ಲಿ ಕುಡುಕರ ಸಂಖ್ಯೆ ಇಳಿಕೆ ಮದ್ಯ ಮಾರಾಟವನ್ನು ನೋಡುವುದಾದರೆ 2019ರ ಏಪ್ರಿಲ್‌ನಿಂದ ಜುಲೈ ತಿಂಗಳಲ್ಲಿ 6,34,069 ಬಾಕ್ಸ್ ಮಾರಾಟವಾಗಿದೆ. ಈಗ 4,80,681 ಬಾಕ್ಸ್ ಮಾತ್ರ ಮಾರಾಟ ಮಾಡಲಾಗಿದೆ. ಶೇ. 24.19ರಷ್ಟು ಮಾರಾಟ ಕುಸಿದಿದೆ.
ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಮದ್ಯ ಕುಡಿಯುವವರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಅದರಲ್ಲೂ ಬಿಯರ್ ಪ್ರಿಯರ ಸಂಖ್ಯೆ ಅರ್ಧದಷ್ಟು ಕಡಿಮೆ ಆಗಿದೆ. ಇದರಿಂದ ಜಿಲ್ಲೆಯ ಹಲವು ಮಹಿಳೆಯರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಬಹುದು.