ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ 2ನೇ ಅಲೆ ಅಬ್ಬರಿಸುತ್ತಿದೆ. ಹಳ್ಳಿ ಹಳ್ಳಿಗೂ ಸೋಂಕು ಹಬ್ಬುತ್ತಿದೆ. ಈಗಾಗಲೇ 950ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸೋಂಕು ಕಾಣಿಸಿದ್ದು, 140 ಗ್ರಾಮಗಳನ್ನ ಸೀಲ್‌ಡೌನ್ ಮಾಡಲಾಗಿದೆ.
ಜಿಲ್ಲೆಯ 1750 ಗ್ರಾಮಗಳ ಪೈಕಿ 950 ಹಳ್ಳಿಗಳಲ್ಲಿ ಸೋಂಕು ಕಾಣಿಸಿದೆ. 25ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿರುವ 140 ಗ್ರಾಮಗಳನ್ನ ಈಗಾಗಲೇ ಸೀಲ್‌ಡೌನ್ ಮಾಡಲಾಗಿದೆ. ಆ್ಯಕ್ಟೀವ್ ಕೇಸ್ ಹಾಗೂ ಸಾವಿನ ಸಂಖ್ಯೆಯೂ ಹಳ್ಳಿಗಳಲ್ಲೇ ಹೆಚ್ಚಾಗಿದೆ. ಪಾಸಿಟಿವ್ ರೇಟ್ ನೋಡುವುದಾದರೆ ಹಳ್ಳಿಗಳಲ್ಲಿ ಶೇ.18.81ರಷ್ಟಿದೆ.
ಎರಡನೇ ಅಲೆಯಲ್ಲಿ ಗ್ರಾಮೀಣ ಪ್ರದೇಶದ175 ಮಂದಿ ಮೃತಪಟ್ಟಿದ್ದಾರೆ. ಸದ್ಯ ಜಿಲ್ಲೆಯಲ್ಲಿ 6281 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 3900 ಪ್ರಕರಣ ಹಳ್ಳಿಗಳದ್ದೇ ಆಗಿದೆ. ಸರ್ಕಾರ ಟೆಸ್ಟಿಂಗ್ ಕಡಿಮೆ ಮಾಡಿರೋದ್ರಿಂದ ಮತ್ತಷ್ಟು ಸೋಂಕು ಉಲ್ಬಣಗೊಳ್ಳುವ ಭೀತಿ ಇದೆ.