ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್​: ಪಥಸಂಚಲನದ ಮೂಲಕ ಕೊರೊನಾ ಕುರಿತು ಜಾಗೃತಿ - mandya Corona awareness news

ಮಂಡ್ಯದಲ್ಲಿ ಪೊಲೀಸರು ಲಾಕ್​ಡೌನ್​ ಮತ್ತು ಕೊರೊನಾ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಪ್ರತಿನಿತ್ಯ ಪಥಸಂಚಲನ ನಡೆಸುತ್ತಿದ್ದಾರೆ. ಜೊತೆಗೆ ಬಿಗಿ ಬಂದೋಬಸ್ತ್​ ವ್ಯವಸ್ಥೆ ಸಹ ಕೈಗೊಳ್ಳಲಾಗಿದೆ.

ಪಥ ಸಂಚಲನದ ಮೂಲಕ ಕೊರೊನಾ ಜಾಗೃತಿ
ಪಥ ಸಂಚಲನದ ಮೂಲಕ ಕೊರೊನಾ ಜಾಗೃತಿ

By

Published : Apr 15, 2020, 8:25 PM IST

ಮಂಡ್ಯ: ಕೊರೊನಾ ಎರಡನೇ ಹಂತದ ಲಾಕ್​ಡೌನ್​​ಅನ್ನು ಪೊಲೀಸರು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಕೊರೊನಾ ಪೀಡಿತ ಪ್ರದೇಶದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಪ್ರತಿನಿತ್ಯ ಪಥಸಂಚಲನದ ಮೂಲಕ ಜಾಗೃತಿ ಮಾಡಿಸುತ್ತಿದ್ದಾರೆ.

ಪಥಸಂಚಲನದ ಮೂಲಕ ಕೊರೊನಾ ಕುರಿತು ಜಾಗೃತಿ

ನಗರದ ಸ್ವರ್ಣಸಂದ್ರ ಸೇರಿದಂತೆ ಮಳವಳ್ಳಿಯಲ್ಲಿ ಪೊಲೀಸ್ ಪಥಸಂಚಲನ ನಡೆಯುತ್ತಿದೆ. ಆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಜೊತೆಗೆ ಲಾಕ್​ಡೌನ್ ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದ್ದಾರೆ. ಅನವಶ್ಯಕವಾಗಿ ಓಡಾಡುತ್ತಿರುವ ಬೈಕ್ ಸವಾರರಿಗೆ ಬಿಸಿ ಮುಟ್ಟಿಸಿ, ಬೈಕ್ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

ಈಗಾಗಲೇ ಡ್ರೋನ್ ಕ್ಯಾಮರಾ ಹಾಕಿದ್ದರೂ ಕೂಡ ಅಲ್ಲಲ್ಲಿ ಜನರು ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ ಕೆ.ಎಸ್.ಆರ್.ಪಿ ತುಕಡಿಯನ್ನು ಜಿಲ್ಲೆಗೆ ಕರೆಸಿಕೊಂಡಿದ್ದು, ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ.

ABOUT THE AUTHOR

...view details