ಮಂಡ್ಯ: ಜನರಿಗೆ ಕೊರೊನಾ ಸೋಂಕು ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮಂಡ್ಯ ಜಿಲ್ಲಾಡಳಿತ ಜಾಗೃತಿ ವಿಡಿಯೋ ಹಾಡು ಹೊರತಂದಿದೆ. ಈ ಮೂಲಕ ಮಾರಕ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ ಕೊರೊನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸುತ್ತಿದೆ.
ಇಡೀ ವಿಶ್ವದಲ್ಲೇ ತಲ್ಲಣ ಉಂಟು ಮಾಡಿರುವ ಕೊರೊನಾ ಮಹಾಮಾರಿ ಸಕ್ಕರೆನಾಡು ಮಂಡ್ಯ ಜಿಲ್ಲೆಯೂ ಕೂಡಾ ನಲುಗುವಂತೆ ಮಾಡಿದೆ. ಮಾರಕ ರೋಗ ಓಡಿಸಲು ಜನರು ಸಹಕಾರ ನೀಡಿದರೆ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರ್ಕಾರ ಹಾಗೂ ಜಿಲ್ಲಾಡಳಿತದ ಆದೇಶವನ್ನು ತಪ್ಪದೇ ಪಾಲಿಸಬೇಕು ಎಂದು ಈ ಗೀತೆಯಲ್ಲಿ ಜನರಿಗೆ ಮನವಿ ಮಾಡಲಾಗಿದೆ.