ಕರ್ನಾಟಕ

karnataka

ETV Bharat / state

ನಿಖಿಲ್​ ಬೆಂಬಲಿಸಲು ಕಾಂಗ್ರೆಸಿಗರ ವಿರೋಧ: ಶಿಸ್ತುಕ್ರಮದ ಎಚ್ಚರಿಕೆಗೂ ಬಗ್ಗದ ಕೈ ಕಾರ್ಯಕರ್ತರು - undefined

ಮಂಡ್ಯ ಲೋಕಸಭೆಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಸಲ್ಲ ಎಂದು ಕಾಂಗ್ರೆಸ್​ ಸಭೆಯಿಂದ ಕಾರ್ಯಕರ್ತರು ಹೊರನಡೆದ ಘಟನೆ ನಡೆದಿದೆ.

ಮೈತ್ರಿ ಅಭ್ಯರ್ಥಿ ನಿಖಿಲ್ ಬೆಂಬಲಿಸಲ್ಲ ಎಂದ ಕಾಂಗ್ರೆಸ್​ ಕಾರ್ಯಕರ್ತರು

By

Published : Apr 10, 2019, 4:57 AM IST

ಮಂಡ್ಯ:ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಒಪ್ಪದ ಕಾಂಗ್ರೆಸ್ಸಿಗರು ತಮ್ಮ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಇದೀಗ ಮಾಜಿ ಕೇಂದ್ರ ಸಚಿವರ ಎದುರೇ ಕಾಂಗ್ರೆಸ್​ ಕಾರ್ಯಕರ್ತರು ನಿಖಿಲ್ ಬೆಂಬಲಿಸಲು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ. ‌

ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್‌ರ ಮನೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ನಿಖಿಲ್​ರನ್ನು ಬೆಂಬಲಿಸುವ ಕುರಿತು ಕಾಂಗ್ರೆಸ್​ ಕಾರ್ಯಕರ್ತರು ಗದ್ದಲ ಆರಂಭಿಸಿದರು. ಈ ವೇಳೆ ನಾಯಕರ ಮೇಲೆ ಹರಿಹಾಯ್ದರು.

ಪುರಸಭೆ ಮಾಜಿ ಅಧ್ಯಕ್ಷ ಹೊಸಹೊಳಲು ಕೃಷ್ಣೇಗೌಡ, ಶೀಳನೆರೆ ಗ್ರಾ.ಪಂ ಉಪಾಧ್ಯಕ್ಷ ಪ್ರಕಾಶ್, ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಚೇತನ್ ಕುಮಾರ್, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಡಿ.ಪ್ರೇಮಕುಮಾರ್ ಕಾಂಗ್ರೆಸ್​ ನಾಯಕರೊಂದಿಗೆ ವಾಗ್ವಾದಕ್ಕಿಳಿದರು.

ಮೈತ್ರಿ ಅಭ್ಯರ್ಥಿ ನಿಖಿಲ್ ಬೆಂಬಲಿಸಲ್ಲ ಎಂದ ಕಾಂಗ್ರೆಸ್​ ಕಾರ್ಯಕರ್ತರು

ಗಲಾಟೆ ನಿಯಂತ್ರಿಸಲು ವಿಫಲರಾದ ರೆಹಮಾನ್ ಖಾನ್​ ಸೇರಿ ಹಲವು ಮುಖಂಡರು ಮೂಕ ಪ್ರೇಕ್ಷಕರಂತೆ ಸುಮ್ಮನೆ ಕೂರುವಂತಾಯಿತು.

ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಕೆಯುಐಡಿಎಫ್​​ಸಿ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಲಿಖಾನ್, ಹಿರಿಯ ಕಾಂಗ್ರೆಸ್ ಮುಖಂಡ ಕೆ.ಯೂನಸ್ ಖಾನ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ವೆಂಕಟಸುಬ್ಬೇಗೌಡ, ಮುಖಂಡ ಶೀಳನೆರೆ ರಮೇಶ್ ಸೇರಿದಂತೆ ನೂರಾರು ಕಾಂಗ್ರೆಸ್ ಮುಖಂಡರು ಹಾಜರಿದ್ದರೂ ಗಲಾಟೆ ನಿಯಂತ್ರಿಸಲಾಗಲಿಲ್ಲ.

ಭಿನ್ನಾಭಿಪ್ರಾಯ ಮರೆತು ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕು. ಮೈತ್ರಿಧರ್ಮದ ವಿರುದ್ಧವಾಗಿ ಕೆಲಸ ಮಾಡಿದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರೂ, ಕಾರ್ಯಕರ್ತರು ಮುಖಂಡರ ಮಾತಿಗೆ ಕವಡೆಕಾಸಿನ ಬೆಲೆ ನೀಡದೆ ಹೊರ ನಡೆದರು.

For All Latest Updates

TAGGED:

ABOUT THE AUTHOR

...view details