ಕರ್ನಾಟಕ

karnataka

ನಾಗಮಂಗಲದಲ್ಲಿ ಪ್ರಜಾಧ್ವನಿ ಯಾತ್ರೆ.. ಜೆಡಿಎಸ್ ಭದ್ರಕೋಟೆಯಲ್ಲಿ ಡಿಕೆಶಿ ಅಬ್ಬರದ ಭಾಷಣ

By

Published : Mar 14, 2023, 4:22 PM IST

Updated : Mar 14, 2023, 4:54 PM IST

ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ= ನಾನು ಮಣ್ಣಿನ ಮಗ, ನಿಮ್ಮದೇ ಜನಾಂಗದವನಿದ್ದೇನೆ, ನನಗೂ ಒಂದು ಅವಕಾಶ ಕೊಡಿ - ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

Prajadhwani Yatra in Nagamangala Constituency
ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಪ್ರಜಾಧ್ವನಿ ಯಾತ್ರೆ ಪುನಾರಂಭಗೊಂಡಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನಿಧನದಿಂದ ಎರೂಡು ದಿನ ಪ್ರಜಾಧ್ವನಿ ಯಾತ್ರೆ ರದ್ದಾಗಿತ್ತು. ಇದೀಗ ಮತ್ತೆ ಆರಂಭವಾಗಿ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಸಂಚರಿಸಿದೆ. ಡಿಕೆಶಿ ಅಬ್ಬರದ ಭಾಷಣ ಮಾಡಿ ಜೆಡಿಎಸ್ ವಿರುದ್ದ ಕಿಡಿಕಾರಿದ್ದಾರೆ.

ಹೌದು, ನಾಗಮಂಗಲದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ಅದ್ಧೂರಿಯಾಗಿ ನಡೆಯಿತು. ನಾಗಮಂಗಲ ನಲ್ಲಿಗೆರೆ ಟೋಲ್ ಬಳಿ ಡಿ ಕೆ ಶಿವಕುಮಾರ್ ಅವರನ್ನು ಅದ್ಧೂರಿಯಾಗಿ ಬೈಕ್ ಜಾಥಾ ಮೂಲಕ ಸ್ವಾಗತಿಸಲಾಯಿತು. ಪಟ್ಟಣದ ಐಬಿ ವೃತ್ತದಲ್ಲಿ ಕ್ರೇನ್ ಮೂಲಕ ಬೃಹತ್ ಹಣ್ಣಿನ ಹಾರ ಹಾಕಿ ಸ್ವಾಗತಿಸಿ ಬಳಿಕ ವೇದಿಕೆ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ ಧ್ರುವನಾರಾಯಣ್ ಭಾವಚಿತ್ರ ಪುಷ್ಪಾರ್ಚನೆ ಸಲ್ಲಿಸಿ ಮೌನಾಚರಣೆ ಮಾಡಿದರು.

ಇದೇ ವೇಳೆ ಪ್ರಜಾಧ್ವನಿ ಸಮಾವೇಶದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಬೆಟ್ಟೇಗೌಡ, ಮನ್ ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಕಾಂಗ್ರೆಸ್​​​ಗೆ ಸೇರ್ಪಡೆಯಾದರು. ಚಲುವರಾಯಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆ. ಇಬ್ಬರಿಗೂ ಪಕ್ಷದ ಬಾವುಟ, ಶಾಲು ಕೊಟ್ಟು, ಹೂವಿನ ಹಾರ ಹಾಕಿ ಡಿಕೆಶಿ ಬರಮಾಡಿಕೊಂಡರು. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ನನ್ನ ಇವತ್ತಿನ ಭಾಷಣವನ್ನು ಜನತಾದಳದ ಕಾರ್ಯಕರ್ತರು ಕೇಳಬೇಕು‌. ಮರಕ್ಕೆ ಬೇರು ಎಷ್ಟು ಮುಖ್ಯನೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಬೇರು ಇಲ್ಲಾಂದ್ರೆ ಮರ ಉಳಿಯಲ್ಲ, ನಂಬಿಕೆ ಇಲ್ಲ ಅಂದರೆ ಸಂಬಂಧ ಉಳಿಯಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ಇಲ್ಲದಿದ್ರೆ ಅದರಿಂದ ಕಷ್ಟ ಆಗುತ್ತೆ ಎಂದು ಹೆಚ್​ಡಿಕೆ, ನಾಗಮಂಗಲ ಶಾಸಕ ಸುರೇಶ್ ಗೌಡ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.

ಹೆಚ್​ಡಿಕೆ ಯಿಂದ ದ್ವೇಷದ ರಾಜಕೀಯ - ಡಿಕೆಶಿ: ಮೊದಲ ಬಾರಿ ಕುಮಾರಸ್ವಾಮಿ ಸಿಎಂ ಆದಾಗ ಮಾಡಿದ ಭಾಷಣ ನೆನಪಿಸಿ ಹೆಚ್ಡಿಕೆ ವಿರುದ್ಧ ಆಕ್ರೋಶ. ದೇವೇಗೌಡರನ್ನು ಅಂದು ಪ್ರಧಾನಿ ಮಾಡಿದ್ದು ನಮ್ಮ ಪಕ್ಷ. ದೇವೇಗೌಡರ ವಿರುದ್ಧ ತೇಜಸ್ವಿನಿ ನಿಲ್ಲಿಸಿ ಸೋಲಿಸಿದ ಸೇಡು ಅವರಿಗಿದೆ. ಹೀಗಾಗಿ ನನ್ನನ್ನು ಸಚಿವ, ಸಿಎಂ ಮಾಡಲು ಬಿಡಲಿಲ್ಲ. ಕುಮಾರಸ್ವಾಮಿ ದ್ವೇಷದ ರಾಜಕಾರಣ ಮಾಡ್ತಾರೆ ಎಂದು ಡಿಕೆಶಿ ಆರೋಪಿಸಿದರು.

ಕುಮಾರಸ್ವಾಮಿ ಕಣ್ಣೀರಿಗೆ ವ್ಯಂಗ್ಯ: ಕುಮಾರಸ್ವಾಮಿ ಕಣ್ಣೀರು ಹಾಕಿದ್ದಕ್ಕೆ ವ್ಯಂಗ್ಯವಾಡಿದ ಡಿಕೆಶಿ, ಪದೆ ಪದೇ ರೈತನ ಮಗ ಎನ್ನುವುದನ್ನು ಖಂಡಿಸಿದರು. ತನ್ನ ವಿರುದ್ಧ ಕೇಸ್ ಹಾಕಿಸಿದ ಕುಮಾರಸ್ವಾಮಿ ವರ್ತನೆಗೆ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದರು. ನಾವು ಸಿಎಂ ಮಾಡಿ ಬೆಂಬಲ ಕೊಟ್ಟಾಗ ಅವ್ರಿಗೆ ಯಾವುದೇ ಕೆಡುಕು ಮಾಡಿಲ್ಲ. ಹಾಗೇನಾದರೂ ಆಗಿದ್ರೆ ಆ ದೇವರು ಏನಾದ್ರು ಶಿಕ್ಷೆ ಕೊಡಲಿ. ಅವ್ರು ಸಿಎಂ ಆಗಿದ್ದಾಗ ಈ ಜಿಲ್ಲೆಯ ಅಭಿವೃದ್ಧಿ ಮಾಡಿದ್ರೆ ಸಾಕ್ಷಿ ತೋರಿಸಲಿ ಎಂದು ಸವಾಲು ಹಾಕಿದರು.

ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಡಿಕೆಶಿ: ನಾನು ಮಣ್ಣಿನ ಮಗನಿದ್ದೇನೆ. ನಾನು ನಿಮ್ಮದೇ ಜನಾಂಗದವನಿದ್ದೇನೆ. ನನಗೂ ಒಂದು ಅವಕಾಶ ಮಾಡಿಕೊಡಿ. ಎನ್ನುತ್ತ ಮತ್ತೆ ಸಿಎಂ ಆಸೆ ಬಿಚ್ಚಿಟ್ಟ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ನಮ್ಮ ಬೆಂಬಲಕ್ಕೆ ನಿಂತಿರೋ ನಿಮ್ಮ ಋಣ ತೀರಿಸೋಕೆ ಆಗಲ್ಲ. ನೀವು ಜಿಲ್ಲೆಯಲ್ಲಿ ಕೊಟ್ಟ ಈ ಸ್ವಾಭಿಮಾನಕ್ಕೆ ನಾವೆಂದು ಧಕ್ಕೆ ತರಲ್ಲ. ಪ್ರಧಾನ ಮಂತ್ರಿ ಮೋದಿ ಅವರು ಮಂಡ್ಯಕ್ಕೆ ಬಂದು ಜೆಡಿಎಸ್ ವಿರುದ್ಧ ಒಂದೂ ಮಾತಾಡಿಲ್ಲ. ಅವ್ರು ಕಾಂಗ್ರೆಸ್ ಮತ್ತು ಪಕ್ಷದ ನಾಯಕರನ್ನು ತೆಗಳಿ ಹೋಗಿದ್ದಾರೆ. ಅವ್ರಿಗೆ ಕಾಂಗ್ರೆಸ್ ಪಕ್ಷ ಮಾತ್ರ ವೈರಿ, ಜೆಡಿಎಸ್ ಲೆಕ್ಕಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾವಿರಾರು ಕೋಟಿ ಅನುದಾನ ನೀಡಿದ ಕಾಂಗ್ರೆಸ್​: ಪ್ರಜಾಧ್ವನಿ ಸಮಾವೇಶದಲ್ಲಿ ಚೆಲುವರಾಯಸ್ವಾಮಿ ಮಾತನಾಡಿ, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ರು. ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಹಲವಾರು ಯೋಜನೆ ಕೊಟ್ಟಿದೆ. ತಾಲೂಕಿನ ನೀರಾವರಿ ಯೋಜನೆಗೆ ಸಾವಿರಾರು ಕೋಟಿ ಅನುದಾನ ತಂದು ಕೊಟ್ಟೆವು.ನಾಲೆಗಳ ಆಧುನೀಕರಣ ಆಗಿದ್ದು ನಮ್ಮ ಅವಧಿಯಲ್ಲಿ.ನಮ್ಮ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ರಸ್ತೆ ಅಭಿವೃದ್ಧಿ ಕೆಲಸ ಕೂಡ ಕಂಪ್ಲೀಟ್ ಆಗಿಲ್ಲ. ಕೆಇಬಿ ಸಬ್​ ಸ್ಟೇಷನ್ ಕೊಟ್ಟಿದ್ದು ಕಾಂಗ್ರೆಸ್‌ ಕಾಲದಲ್ಲಿ, ಕ್ಷೇತ್ರದಲ್ಲಿ ನಮ್ಮ ಅವಧಿಯಲ್ಲಿ ಕೊಟ್ಟ ಕೊಡುಗೆ ಬಿಟ್ಟರೆ, ಈಗ 5 ವರ್ಷದ ಅವಧಿಯಲ್ಲಿ ಒಂದೇ ಒಂದು ಹೊಸ ಅನುದಾನ ತರಲಿಲ್ಲ ಎಂದು ಆರೋಪಿಸಿದರು.

ಸೋಲಿಸಲು ಕುಮಾರಸ್ವಾಮಿ ಪದೇ ಪದೆ ಬಂದ್ರು- ಡಿ ಕೆ ಶಿವಕುಮಾರ್​: ಕಳೆದ ಬಾರಿ ಏಳಕ್ಕೆ ಏಳು ಕ್ಷೇತ್ರದಲ್ಲಿ ಜೆಡಿಎಸ್‌ ಗೆಲ್ಲಿಸಿದ್ರಿ. ನನ್ನ ಸೋಲಿಸಲು ಪದೇ ಪದೇ ಕ್ಷೇತ್ರಕ್ಕೆ ಕುಮಾರಸ್ವಾಮಿ ಬಂದು ಹೋದ್ರು. ಅಧಿಕಾರ ಸಿಕ್ಕಾಗ ಒಮ್ಮೆಯೂ ನಿಮ್ಮ ಕಷ್ಟ ಸುಖ ಆಲಿಸಲು ಬರಲಿಲ್ಲ. ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡ್ತೀನಿ ಅಂತೇಳಿ ಮಾಡಲಿಲ್ಲ. ರಾಜ್ಯದ ಜನರ ಬದುಕಿಗಾಗಿ ಕಾಂಗ್ರೆಸ್‌ ಗೆಲ್ಲಿಸಿ. ಯೋಜನೆಗಳನ್ನು ಜಾರಿಗೆ ತರ್ತಿವಿ ಎಂದು ಡಿಕೆಶಿ ಮನವಿ ಮಾಡಿದರು.

ಇದನ್ನೂಓದಿ:ದಕ್ಷಿಣ ಕನ್ನಡದ ಕುತೂಹಲದ ಕ್ಷೇತ್ರ ಬಂಟ್ವಾಳ: ಮಾಜಿ ಸಚಿವ-ಹಾಲಿ ಶಾಸಕರ ಮಧ್ಯೆ ಬಿಗ್ ಫೈಟ್

Last Updated : Mar 14, 2023, 4:54 PM IST

ABOUT THE AUTHOR

...view details