ಮಂಡ್ಯ:ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ಕಾಂಗ್ರೆಸ್ ನಾಯಕರು ಲೋಕ ಸಮರದ ನಂತರ ಆಕ್ಟೀವ್ ಆಗಿದ್ದಾರೆ. ಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಳ್ಳುತ್ತಿದ್ದು, ಜನರ ಸಮಸ್ಯೆಗಳ ಪಟ್ಟಿ ಮಾಡಲು ಶುರು ಮಾಡಿದ್ದಾರೆ.
ಸೋಲಿನ ನಂತರ ಕಲಿತ ಪಾಠ! ಜನರ ಸಮಸ್ಯೆಗೆ ಕಿವಿಯಾಗಲು ಹೊರಟ ಜನನಾಯಕ - undefined
ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ ರವಿಕುಮಾರ್ ಗಣಿಗ ಈಗ ಜಿಲ್ಲೆಯ ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ.
![ಸೋಲಿನ ನಂತರ ಕಲಿತ ಪಾಠ! ಜನರ ಸಮಸ್ಯೆಗೆ ಕಿವಿಯಾಗಲು ಹೊರಟ ಜನನಾಯಕ](https://etvbharatimages.akamaized.net/etvbharat/prod-images/768-512-3448613-thumbnail-3x2-megha.jpg)
ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ ರವಿಕುಮಾರ್ ಗಣಿಗ, ಈಗ ನಗರ ಪ್ರದಕ್ಷಿಣೆ ಆರಂಭಿಸಿದ್ದಾರೆ. ನಗರದ ಮುಸ್ಲಿಮ್ ಬ್ಲಾಕ್‌ಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಇಂದು ಎಲ್ಲಾ ವಾರ್ಡ್‌ಗಳಿಗೆ ಭೇಟಿ ನೀಡಿ ಮನವಿ ಸ್ವೀಕಾರದ ಜೊತೆಗೆ ಸಮಸ್ಯೆಗಳನ್ನು ಪಟ್ಟಿ ಮಾಡಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಿದ್ದಾರೆ. ಮಂಡ್ಯ ಜಿಲ್ಲೆಯ ಮತದಾರರು ಜೆಡಿಎಸ್ ಬೆಂಬಲಿಸಿದರೂ ಅಭಿವೃದ್ಧಿ ಆಗಿಲ್ಲ. ಮಳೆಗಾಲ ಬಂತು ಅಂದರೆ ಹಲವು ಬಡಾವಣೆಗಳಲ್ಲಿ ಜನರು ಸಮಸ್ಯೆ ಎದುರಿಸುತ್ತಿದ್ದರು. ಕಳೆದ ರಾತ್ರಿ ಸುರಿದ ಮಳೆಗೆ ಬೀಡಿ ಕಾರ್ಮಿಕ ಕಾಲೋನಿ ನಿವಾಸಿಗಳ ಮನೆಗೆ ನೀರು ನುಗ್ಗಿ ತೊಂದರೆಯಾಗಿದೆ. ಹೀಗಾಗಿ ಸಮಸ್ಯೆ ಇರುವ ಕಡೆ ಸಂಚಾರ ಮಾಡಿ ಜನರ ಸಂಕಷ್ಟ ಆಲಿಸುತ್ತಿದ್ದಾರೆ.