ಕರ್ನಾಟಕ

karnataka

ETV Bharat / state

'ದೇವೇಗೌಡ-ಕುಮಾರಸ್ವಾಮಿಗಿಂತಲೂ ಶ್ರೇಷ್ಠ ಒಕ್ಕಲಿಗ ನಾನು'.. - ಕುಮಾರಸ್ವಾಮಿಗಿಂತ ಶ್ರೇಷ್ಠ ಒಕ್ಕಲಿಗ ನಾನು

ಮಂಡ್ಯ ಜಿಲ್ಲೆ ಕೆಆರ್‌ಪೇಟೆ ಉಪಚುನಾವಣೆ ಕಾವು ಚಳಿಗಾಲದಲ್ಲೂ ಸರ್‌ರ್‌.. ಅಂತಾ ಏರುತ್ತಲೇ ಇದೆ. ಮತದಾರರನ್ನ ಸೆಳೆಯಲು ಕಾಂಗ್ರೆಸ್ ಅಭ್ಯರ್ಥಿ ಜಾತಿ ಟ್ರಂಪ್​ ಕಾರ್ಡ್ ಬಳಸಿದ್ದಾರೆ.

ದೇವೇಗೌಡ ಕುಮಾರಸ್ವಾಮಿ
ದೇವೇಗೌಡ ಕುಮಾರಸ್ವಾಮಿ

By

Published : Nov 27, 2019, 4:50 PM IST

ಮಂಡ್ಯ:ದೇವೇಗೌಡರು-ಕುಮಾರಸ್ವಾಮಿ ಒಕ್ಕಲಿಗರಿರಬಹುದು. ನಾನೂ ಒಕ್ಕಲಿಗನೇ ಅದರಲ್ಲೂ ಗಂಗಡಕಾರ್ ಒಕ್ಕಲಿಗ. ಅವರಿಗಿಂತ ನಾನು ಶ್ರೇಷ್ಠ ಅಂತಾ ಕಾಂಗ್ರೆಸ್ ಅಭ್ಯರ್ಥಿ ಕೆ ಬಿ ಚಂದ್ರಶೇಖರ್ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಕೆಬಿ ಚಂದ್ರಶೇಖರ್..

ಕೆಆರ್‌ಪೇಟೆ ಕ್ಷೇತ್ರದ ಮಂದಗೆರೆಯಲ್ಲಿ ಪ್ರಚಾರ ನಡೆಸುತ್ತಿದ್ದ ಕೈ ಅಭ್ಯರ್ಥಿ ಕೆ ಬಿ ಚಂದ್ರಶೇಖರ್ ಬಹಿರಂಗ ಪ್ರಚಾರದ ವೇಳೆ ಮಾತನಾಡಿ, ಕಳೆದ ಬಾರಿ ಚುನಾವಣೆಯಲ್ಲಿ ನಮ್ಮ ಒಕ್ಕಲಿಗ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ಎಲ್ಲ ಮತ ಹಾಕಿದ್ರು. ಅವರೊಬ್ಬರು ಮಾತ್ರ ಒಕ್ಕಲಿಗರಾ? ನಾನು ಒಕ್ಕಲಿಗನೇ.. ಅದು ಗಂಗಡಕಾರ ಒಕ್ಕಲಿಗ ನಾನು. ದೇವೇಗೌಡ- ಕುಮಾರಸ್ವಾಮಿ ಒಕ್ಕಲುತನಕ್ಕೆ ನನ್ನದು ಶ್ರೇಷ್ಠವಾದ ಒಕ್ಕಲುತನ ಎಂದಿದ್ದಾರೆ.

ದೇವೇಗೌಡ-ಕುಮಾರಸ್ವಾಮಿಗಿಂತ ನಂದೇ ಶ್ರೇಷ್ಠವಾದ ಒಕ್ಕಲುತನ. ನೀನು ಸತ್ತರೆ ನಾನು ಬರ್ತೀನಿ, ನಾನು ಸತ್ತರೆ ನೀವು ಬರುತ್ತೀರಾ.. ಕುಮಾರಸ್ವಾಮಿ ಬಂದನಾ? ದೇವೇಗೌಡ್ರು ಬಂದರಾ? ಇದನ್ನು ನೀವು ತಿಳ್ಕೋಬೇಕು ಎಂದಿದ್ದಾರೆ.

ABOUT THE AUTHOR

...view details