ಮಂಡ್ಯ: ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗೆ ಸೇರಿದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಂಪ್ಯೂಟರ್ಗಳು, ಸಿಸಿಟಿವಿ ಕ್ಯಾಮರಾಗಳು, ಯುಪಿಎಸ್ ಬ್ಯಾಟರಿಗಳು ಹಾಗೂ ಡಿಕೋಡರ್ಗಳನ್ನು ಕಳ್ಳತನ ಮಾಡಿರುವ ಘಟನೆ ಕೆ.ಆರ್. ಪೇಟೆ ಪಟ್ಟಣದಲ್ಲಿ ನಡೆದಿದೆ.
ಕೆ ಆರ್ ಪೇಟೆ ಸರ್ಕಾರಿ ಕಾಲೇಜಿನಲ್ಲಿ 25ಕ್ಕೂ ಹೆಚ್ಚು ಕಂಪ್ಯೂಟರ್‌ಗಳ ಕಳ್ಳತನ - ಮಂಡ್ಯ ಕಂಪ್ಯೂಟರ್ ಕಳ್ಳತನ ಪ್ರಕರಣ
ಮಂಡ್ಯ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ಕೂಡಾ ಕೆ ಆರ್ ಪೇಟೆ ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಕಾಲೇಜಿನಲ್ಲಿದ್ದ 25 ಕ್ಕೂ ಹೆಚ್ಚು ಕಂಪ್ಯೂಟರ್, ಸಿಸಿಟಿವಿ ಡಿಕೋಡರ್, 30ಕ್ಕೂ ಹೆಚ್ಚು ಬ್ಯಾಟರಿ ಕಳ್ಳತನವಾಗಿವೆ.
![ಕೆ ಆರ್ ಪೇಟೆ ಸರ್ಕಾರಿ ಕಾಲೇಜಿನಲ್ಲಿ 25ಕ್ಕೂ ಹೆಚ್ಚು ಕಂಪ್ಯೂಟರ್‌ಗಳ ಕಳ್ಳತನ computers-stolen-from-mandya-government-college](https://etvbharatimages.akamaized.net/etvbharat/prod-images/768-512-8330282-thumbnail-3x2-cmp.jpg)
ಕಂಪ್ಯೂಟರ್ ಕಳ್ಳತನ
ಕೊಠಡಿಯ ಬೀಗ ಮುರಿದು 25ಕ್ಕೂ ಹೆಚ್ಚು ಕಂಪ್ಯೂಟರ್ ಸಿಪಿಯುಗಳು, ಸಿಸಿ ಟಿವಿಯ ಡಿಕೋಡರ್ಗಳು, 30ಕ್ಕೂ ಹೆಚ್ಚು ಬ್ಯಾಟರಿಗಳನ್ನು ಕಳ್ಳತನ ಮಾಡಲಾಗಿದ್ದು, ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಡ್ಯ ಸರ್ಕಾರಿ ಕಾಲೇಜಿನ ಕಂಪ್ಯೂಟರ್‌ಗಳ ಕಳ್ಳತನ
ಕಳೆದ 15 ದಿನಗಳ ಹಿಂದೆಯಷ್ಟೇ ಹರಿಹರಪುರ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಳ್ಳತನ ನಡೆಸಿ ಕಂಪ್ಯೂಟರ್ಗಳು ಹಾಗೂ ಯುಪಿಎಸ್ ಬ್ಯಾಟರಿಗಳ ಕಳ್ಳತನ ಮಾಡಲಾಗಿತ್ತು. ಈಗ ಪಟ್ಟಣದ ಹೃದಯ ಭಾಗದಲ್ಲಿರುವ ಕಾಲೇಜಿನಲ್ಲಿ ಖದೀಮರು ಮತ್ತೆ ಕೈಚಳಕ ತೋರಿಸಿದ್ದಾರೆ.