ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಬಹುಮಾನ ನೀಡಿದ ಮುಸ್ಲಿಂ ಸಂಘಟನೆ ವಿರುದ್ಧ ದೂರು - Complaint against Muslim outfit

ಹತ್ತಾರು ವಿದ್ಯಾರ್ಥಿಗಳು ಅವಳನ್ನು ಹಿಂಬಾಲಿಸಿ 'ಜೈ ಶ್ರೀ ರಾಮ್' ಎಂದು ಪ್ರತಿ ಘೋಷಣೆಗಳನ್ನು ಕೂಗಿದಾಗಲೂ ಅವಳು ಏಕಾಂಗಿಯಾಗಿ ಗುಂಪನ್ನು ಎದುರಿಸಿದಳು. ನಂತರ 'ಅಲ್ಲಾ ಹು ಅಕ್ಬರ್' ಎಂಬ ಪ್ರತಿ ಘೋಷಣೆಯನ್ನು ಎತ್ತಿದಳು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

complaint-against-muslim-outfit-for-rewarding-student-chanting-allah-hu-akbar
ವಿದ್ಯಾರ್ಥಿ

By

Published : Feb 10, 2022, 3:04 PM IST

Updated : Feb 10, 2022, 4:41 PM IST

ಮಂಡ್ಯ: ಜಿಲ್ಲೆಯಲ್ಲಿ ಹಿಜಾಬ್​​​​​ಗೆ ಸಂಬಂಧಿಸಿದಂತೆ ಪ್ರತಿಭಟನೆಯ ವೇಳೆ ‘ಅಲ್ಲಾ ಹು ಅಕ್ಬರ್’ ಘೋಷಣೆ ಕೂಗಿದ ವಿದ್ಯಾರ್ಥಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ ಮುಸ್ಲಿಂ ಸಂಘಟನೆ ಜಮೀಯತ್ ಉಲೇಮಾ - ಎ - ಹಿಂದ್ ವಿರುದ್ಧ ಮಂಡ್ಯ ಪೊಲೀಸರಿಗೆ ನರೇಂದ್ರ ಮೋದಿ ವಿಚಾರ ಮಂಚ್ ದೂರು ನೀಡಿದೆ.

ನರೇಂದ್ರ ಮೋದಿ ವಿಚಾರ್ ಮಂಚ್ ವೇದಿಕೆ ರಾಜ್ಯ ಕಾರ್ಯದರ್ಶಿ ಸಿ.ಟಿ.ಮಂಜುನಾಥ್ ಸೇರಿದಂತೆ ಕಾರ್ಯಕರ್ತರು ಇಂದು ಮಂಡ್ಯ ಎಸ್​ಪಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ಈ ಹಿಜಾಬ್ ಪ್ರಕರಣದ ಸೂಕ್ತ ತನಿಖೆ ನಡೆಸಿ ಸೂಕ್ತ ಕಾನೂನು‌ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಮಂಡ್ಯದಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಬಹುಮಾನ ನೀಡಿದ ಮುಸ್ಲಿಂ ಸಂಘಟನೆ ವಿರುದ್ಧ ದೂರು

ಜಿಲ್ಲೆಯ ಪಿಇಎಸ್ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ವಿದ್ಯಾರ್ಥಿ ಮುಸ್ಕಾನ್ ಖಾನ್ ಬುರ್ಕಾ ಧರಿಸಿದ್ದಕ್ಕಾಗಿ ಕಾಲೇಜು ಆವರಣದಲ್ಲಿ ಜನಜಂಗುಳಿಯಿಂದ ನೂಕುನುಗ್ಗಲು ಉಂಟಾಗಿತ್ತು.

ಹತ್ತಾರು ವಿದ್ಯಾರ್ಥಿಗಳು ಅವಳನ್ನು ಹಿಂಬಾಲಿಸಿ 'ಜೈ ಶ್ರೀ ರಾಮ್' ಎಂದು ಪ್ರತಿ ಘೋಷಣೆಗಳನ್ನು ಕೂಗಿದಾಗಲೂ ಅವಳು ಏಕಾಂಗಿಯಾಗಿ ಗುಂಪನ್ನು ಎದುರಿಸಿದ್ದರು . ನಂತರ 'ಅಲ್ಲಾ ಹು ಅಕ್ಬರ್' ಎಂಬ ಪ್ರತಿ ಘೋಷಣೆ ಕೂಗಿ ಪ್ರತಿರೋಧ ತೋರಿಸಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಡ್ಯದಲ್ಲಿ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಬಹುಮಾನ ನೀಡಿದ ಮುಸ್ಲಿಂ ಸಂಘಟನೆ ವಿರುದ್ಧ ದೂರು

ಜಿಲ್ಲೆಯ ಪಿಇಎಸ್ ಕಾಲೇಜ್​ ಬಳಿ 'ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿ ಪ್ರತಿಕ್ರಿಯೆ ನೀಡಿದ್ದು, ಅವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರು, ನಾನು ಅಲ್ಲಾ ಹು ಅಕ್ಬರ್ ಎಂದು ಕೂಗಿದೆ ಇದರಲ್ಲಿ ನಂದೂ ತಪ್ಪಿಲ್ಲ, ಅವರದ್ದೂ ತಪ್ಪಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಅವರು ಕೂಗಿದ್ದು ತಪ್ಪಲ್ಲ, ನಾನು ಕೂಗಿದ್ದು ತಪ್ಪಲ್ಲ. ನಾನು ನನ್ನ ಧರ್ಮ ಪಾಲನೆ ಮಾಡಿದ್ದೇನೆ. ಅವರು ನನ್ನ ಕಿವಿ ಬಳಿ ಬಂದು ಘೋಷಣೆ ಕೂಗಿದ್ರು, ಆಗ ನನಗೆ ಯಾವ ಭಯವೂ ಆಗಲಿಲ್ಲ. ನಾನು ಯಾಕೆ ಬೈ ಪಡಬೇಕು ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದರು.

ಓದಿ:ಮಂಡ್ಯ: ಹತ್ಯೆಗೂ ಮುನ್ನ ಚಿಕನ್ ಶಾಪ್​​ನಿಂದ ಮಚ್ಚು ತಂದಿದ್ದಳಂತೆ ಕೊಲೆಗಾತಿ..

Last Updated : Feb 10, 2022, 4:41 PM IST

ABOUT THE AUTHOR

...view details