ಕರ್ನಾಟಕ

karnataka

ETV Bharat / state

ಆರ್​ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ದ ತನಿಖೆ ನಡೆಸುವಂತೆ ಐಜಿಗೆ ದೂರು - ಭಾರತ ಸಂವಿಧಾನ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪೂರ್ಣಚಂದ್ರ

ರಾಜ್ಯದ ಪ್ರಮುಖ ರಾಜಕಾರಣಿಗಳು ಮತ್ತು ಅಧಿಕಾರಿಗಳ ಅನೇಕ ಸಿಡಿಗಳನ್ನು ಇಟ್ಟುಕೊಂಡು ದಿನೇಶ್ ಕಲ್ಲಹಳ್ಳಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಪೂರ್ಣಚಂದ್ರ ಆರೋಪಿಸಿದ್ದಾರೆ. ಸಚಿವರ ಸಿಡಿ ಬಿಡುಗಡೆ ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ತಕ್ಷಣವೇ ದಿನೇಶ್ ಕಲ್ಲಹಳ್ಳಿಯನ್ನು ಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

Constitution of India Constitutional Protection Forum District President Poornachandra
ಭಾರತ ಸಂವಿಧಾನ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪೂರ್ಣಚಂದ್ರ

By

Published : Mar 4, 2021, 3:50 PM IST

ಮಂಡ್ಯ:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಧಿಸಿದಂತೆ ಆರ್​ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ದ ತನಿಖೆ ನಡೆಸುವಂತೆ ಬೆಂಗಳೂರು ಐಜಿಗೆ ದೂರು ನೀಡಲಾಗಿದೆ. ಮಂಡ್ಯದ ಭಾರತ ಸಂವಿಧಾನ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪೂರ್ಣಚಂದ್ರ ಎಂಬುವವರು ದೂರು ಸಲ್ಲಿಸಿದ್ದಾರೆ.

ಆರ್​ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ದ ತನಿಖೆಗೆ ಆಗ್ರಹಿಸಿ ಬೆಂಗಳೂರು ಐಜಿಗೆ ದೂರು

ರಾಜ್ಯದ ಪ್ರಮುಖ ರಾಜಕಾರಣಿಗಳು ಮತ್ತು ಅಧಿಕಾರಿಗಳ ಅನೇಕ ಸಿಡಿಗಳನ್ನು ಇಟ್ಟುಕೊಂಡು ದಿನೇಶ್ ಕಲ್ಲಹಳ್ಳಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಪೂರ್ಣಚಂದ್ರ ಆರೋಪಿಸಿದ್ದಾರೆ. ಸಚಿವರ ಸಿಡಿ ಬಿಡುಗಡೆ ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ತಕ್ಷಣವೇ ದಿನೇಶ್ ಕಲ್ಲಹಳ್ಳಿಯನ್ನು ಬಂಧಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಆರ್​ಟಿಐ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧದ ದೂರಿನ ಪ್ರತಿ

ತನಿಖೆ ನಡೆಸಿ ಈತನ ಬಳಿ ಎಷ್ಟು ಸಿಡಿಗಳಿವೆ, ಇದರ ಹಿಂದಿರೋ ಪ್ರಭಾವಿಗಳು ಯಾರು ಅನ್ನೋದನ್ನು ಬಹಿರಂಗ ಪಡಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಈ ಭಿಕ್ಷುಕ ಕೋಟ್ಯಧಿಪತಿಯಂತೆ.. ಹಾಗಾದ್ರೆ ಭಿಕ್ಷೆ ಬೇಡಿದ್ಯಾಕೆ?

ABOUT THE AUTHOR

...view details