ಮಂಡ್ಯ: ಉಪ ಚುನಾವಣೆ ಜಾರಿಯಾಗಿರುವ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚೆಕ್ಪೋಸ್ಟ್ಗಳಲ್ಲಿ ಪ್ರತಿ ವಾಹನಗಳ ತಪಾಸಣೆ ನಡೆಸಿಯೇ ಮುಂದೆ ಕಳುಹಿಸಲಾಗುತ್ತಿದೆ.
ನೀತಿ ಸಂಹಿತೆ ಉಲ್ಲಂಘನೆ: ಚೆಕ್ಪೋಸ್ಟ್ನಲ್ಲಿ ತಡೆದರೂ ಕಾರು ನಿಲ್ಲಿಸದೇ ತೆರಳಿದ ಗೃಹ ಸಚಿವ - ಬಸವರಾಜ ಬೊಮ್ಮಾಯಿ ಇತ್ತೀಚಿನ ಸುದ್ದಿ
ಉಪ ಚುನಾವಣೆಯ ನಿಯಮವನ್ನು ಗೃಹ ಸಚಿವರೇ ಮುರಿದ ಘಟನೆ ಮಂಡ್ಯ ಜಿಲ್ಲೆಯ ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.
ಆದರೆ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಗೃಹ ಸಚಿವರ ಕಾರನ್ನು ಮಂಡ್ಯ ಸಮೀಪದ ಹನಕೆರೆ ಬಳಿ ತಪಾಸಣೆಗೆ ಅಧಿಕಾರಿಗಳು ಕೈ ಒಡ್ಡಿ ನಿಲ್ಲಿಸಲು ಯತ್ನಿಸಿದರೂ ನಿಲ್ಲಿಸದೇ ತೆರಳಿದ್ದಾರೆ. ಈ ಮೂಲಕ ಗೃಹ ಸಚಿವರೇ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಕೇಳಿ ಬಂದಿದೆ.
ಕಾರನ್ನು ನಿಲ್ಲಿಸದೇ ತೆರಳಿದ ಎಕ್ಸ್‌ಕ್ಲ್ಯೂಸಿವ್ ವಿಡಿಯೋ ಈ ಟಿವಿ ಭಾರತ್ಗೆ ಲಭ್ಯವಾಗಿದೆ. ಇಂದು ಬೆಳಗ್ಗೆ ಸುಮಾರು 10.40ರ ಸಮಯದಲ್ಲಿ ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನ ತಪಾಸಣೆಗಾಗಿ ಚೆಕ್‌ಪೋಸ್ಟ್ ಅಧಿಕಾರಿಗಳು ಕೈ ಒಡ್ಡಿದ್ದಾರೆ. ಆದರೆ ಕಾರು ನಿಲ್ಲಿಸದೇ ತೆರಳಿದ ಘಟನೆ ನಡೆದಿದೆ.