ಮಂಡ್ಯ:ಆಹಾರ ಅರಸಿ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನ ಬೃಂದಾವನಕ್ಕೆ ಬಂದಿದ್ದ ಸುಮಾರು 10ಅಡಿ ಉದ್ದದ ಹೆಬ್ಬಾವೊಂದನ್ನು ಯುವಕರ ತಂಡ ಹಿಡಿದು ಅರಣ್ಯಕ್ಕೆ ಬಿಟ್ಟಿದೆ.
ಆಹಾರ ಅರಸಿ ಬೃಂದಾವನಕ್ಕೆ ಬಂದ ಹೆಬ್ಬಾವು.. ನೋಡಿದವರ ಮೈರೋಮ ನೆಟ್ಟಗಾದವು.. - undefined
ಇಂದು ಆಹಾರ ಅರಸಿ ಕೆಆರ್‌ಎಸ್‌ನ ಬೃಂದಾವನದಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವೊಂದು ಕಂಡು ಬಂದಿದ್ದು, ಇದನ್ನು ಹಿಡಿದು ಸುರಕ್ಷಿತವಾಗಿ ಉರಗ ತಜ್ಞ ಅರಣ್ಯಕ್ಕೆ ಬಿಟ್ಟಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನಲ್ಲಿ ನಡೆದಿದೆ.
![ಆಹಾರ ಅರಸಿ ಬೃಂದಾವನಕ್ಕೆ ಬಂದ ಹೆಬ್ಬಾವು.. ನೋಡಿದವರ ಮೈರೋಮ ನೆಟ್ಟಗಾದವು..](https://etvbharatimages.akamaized.net/etvbharat/prod-images/768-512-3932584-thumbnail-3x2-hebbavu.jpg)
Mandya
ಕೆಆರ್‌ಎಸ್‌ನ ಬೃಂದಾವನದಲ್ಲಿ ಕಂಡು ಬಂದ ಹೆಬ್ಬಾವನ್ನು ರಕ್ಷಿಸಿದ ಉರಗ ತಜ್ಞ
ಇಂದು ಬೆಳಗ್ಗೆ ಆಹಾರ ಅರಸಿ ಹೆಬ್ಬಾವೊಂದು ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನ ಬೃಂದಾವನಕ್ಕೆ ಬಂದಿತ್ತು. ಇದನ್ನು ಕಂಡ ಯುವಕರು ಉರಗ ತಜ್ಞ ದೀಪುರವರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ದೀಪು ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಈ ಹಾವು ಸುಮಾರು 10 ಅಡಿ ಉದ್ದವಿದ್ದು, 30 ಕೆಜಿ ತೂಕವಿತ್ತು. ಹೆಬ್ಬಾವನ್ನು ಹಿಡಿದು ಸಂರಕ್ಷಣೆ ಮಾಡಿದ ಉರಗ ತಜ್ಞ ದೀಪು ಅವರಿಗೆ ಪ್ರವಾಸಿಗರು ಅಭಿನಂದನೆ ಸಲ್ಲಿಸಿದರು.