ಕರ್ನಾಟಕ

karnataka

ETV Bharat / state

ರೋಗಿಗಳಿಗೆ ಔಷಧಿ ಪೂರೈಸುತ್ತಿರುವ ಸಿಎಂ ಪುತ್ರ: ಸಕ್ಕರೆ ನಾಡಿನ ಮಹಿಳೆಯ ಸಮಸ್ಯೆಗೆ ಸ್ಪಂದಿಸಿದ ವಿಜಯೇಂದ್ರ - latest mandya news

ಮಳವಳ್ಳಿ ತಾಲೂಕಿನ ಹಲಗೂರಿನ ಶಾಂತಕುಮಾರಿ ಎಂಬುವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಾಕ್​ಡೌನ್​ನಿಂದಾಗಿ ಔಷಧಿ ಸಿಗದೆ ಇದ್ದಾಗ ಆಗ ಶಾಂತಕುಮಾರಿ ಪತಿ ಸರ್ಪೇಶ್ ಅವರು ಬಿಜೆಪಿ ಮುಖಂಡರ ಮೊರೆ ಹೋಗಿದ್ದರು. ಈ ಸಮಸ್ಯೆಯನ್ನು ಬಿಜೆಪಿ ಮುಖಂಡರು ಸಿಎಂ ಪುತ್ರ ಬಿ ವೈ ವಿಜಯೇಂದ್ರ ಅವರ ಗಮನಕ್ಕೆ ತಂದಿದ್ದರು. ವಿಚಾರ ತಿಳಿದ ಅವರು ಸುಮಾರು ಒಂದು ತಿಂಗಳಿಗೆ ಆಗುವಷ್ಟು ಔಷಧಿಗಳನ್ನು ಕಳುಹಿಸಿಕೊಟ್ಟಿದ್ದಾರೆ.

cms-son-supplying-medicine-to-patients
ಸಿಎಂ ಪುತ್ರ ಬಿ. ವೈ. ವಿಜಯೇಂದ್ರ

By

Published : Apr 21, 2020, 6:10 PM IST

ಮಂಡ್ಯ: ಜಿಲ್ಲೆಯಲ್ಲಿ ಸಿಎಂ ಪುತ್ರ ಬಿ. ವೈ. ವಿಜಯೇಂದ್ರ ಸದ್ದಿಲ್ಲದೇ ರೋಗಿಗಳ ಸೇವೆ ಮಾಡುತ್ತಿದ್ದಾರೆ. ತಮ್ಮ ಸಂಸ್ಥೆ ವತಿಯಿಂದ ತುರ್ತು ಅವಶ್ಯಕತೆ ಇರುವ ಕುಟುಂಬಗಳಿಗೆ ಸಾವಿರಾರು ರೂಪಾಯಿ ಮೌಲ್ಯದ ಔಷಧಿಗಳನ್ನು ಬೆಂಬಲಿಗರ ಮೂಲಕ ವಿತರಣೆ ಮಾಡಿಸುತ್ತಿದ್ದಾರೆ.

ಮಳವಳ್ಳಿ ತಾಲೂಕಿನ ಹಲಗೂರಿನ ಶಾಂತಕುಮಾರಿ ಎಂಬುವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಲಾಕ್​ಡೌನ್​ನಿಂದಾಗಿ ಔಷಧಿ ಸಿಗದೆ ಇದ್ದಾಗ ಆಗ ಶಾಂತಕುಮಾರಿ ಪತಿ ಸರ್ಪೇಶ್ ಅವರು ಬಿಜೆಪಿ ಮುಖಂಡರ ಮೊರೆ ಹೋಗಿದ್ದರು. ಈ ಸಮಸ್ಯೆಯನ್ನು ಬಿಜೆಪಿ ಮುಖಂಡರು ವಿಜಯೇಂದ್ರ ಅವರ ಗಮನಕ್ಕೆ ತಂದಿದ್ದರು. ವಿಚಾರ ತಿಳಿದ ಸಿಎಂ ಪುತ್ರ ಸುಮಾರು ಒಂದು ತಿಂಗಳಿಗೆ ಆಗುವಷ್ಟು ಔಷಧಿಗಳನ್ನು ಕಳುಹಿಸಿಕೊಟ್ಟಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಗೆ ಔಷಧಿ ಕಳಿಸಿದ್ರು ಸಿಎಂ ಪುತ್ರ ಬಿ. ವೈ. ವಿಜಯೇಂದ್ರ

ಇವರ ಜೊತೆ ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಯುವತಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಔಷಧಿ ಸಿಗದೆ ಪರದಾಡುತ್ತಿದ್ದಾಗ ಅವರಿಗೂ ಕೂಡ ವಿಜಯೇಂದ್ರ ಸಹಾಯ ಮಾಡಿದ್ದಾರೆ.

ಸದ್ಯ ಸಿಎಂ ಪುತ್ರನ ಈ ಸಾಮಾಜಿಕ ಕಳಕಳಿ ಸಕ್ಕರೆ ನಾಡಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details