ಮಂಡ್ಯ: ಮಡಿಕೇರಿಯಲ್ಲಿ ಮಳೆ ಹಿನ್ನೆಲೆ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಇದರಿಂದ ಕೆಆರ್ಎಸ್ ಗರಿಷ್ಠ ಮಟ್ಟ ತಲುಪಿದ್ದು, ತಮಿಳುನಾಡಿಗೂ ವಾಡಿಕೆಗಿಂತ ಹೆಚ್ಚಿನ ನೀರನ್ನು ಬಿಡಲಾಗಿದೆ.
ಮೈದುಂಬಿದ ಕಾವೇರಿ: ಕೆಆರ್ಎಸ್ನಲ್ಲಿ ಬಾಗಿನ ಅರ್ಪಿಸಲಿರುವ ಸಿಎಂ - ಕಾವೇರಿ ನದಿ
ಮಳೆಯಿಂದಾಗಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಇದರಿಂದ ಕೆಆರ್ಎಸ್ ಗರಿಷ್ಠ ಮಟ್ಟ ತಲುಪಿದೆ. ಅಂತೆಯೇ ಬಾಗಿನ ಅರ್ಪಿಸಲು ಸಿಎಂ ಆಗಮಿಸುವ ಸಾಧ್ಯತೆ ಇದೆ.
ಭದ್ರತಾ ಪರಿಶೀಲನೆ
ತುಂಬಿರುವ ಕೆಆರ್ಎಸ್ ಅಣೆಕಟ್ಟೆಗೆ ಸೋಮವಾರವೇ ಸಿಎಂ ಬಿ.ಎಸ್.ಯಡಿಯೂರಪ್ಪ ಬಾಗಿನ ಅರ್ಪಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಣೆಕಟ್ಟೆಗೆ ಮಂಡ್ಯ ಎಸ್ಪಿ ಪರಶುರಾಮ್, ಸ್ಥಳೀಯ ನೀರಾವರಿ ಇಲಾಖೆ ಅಧಿಕಾರಿಗಳು, ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಸಿಎಂ ಭೇಟಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಂದೊಮ್ಮೆ ಸೋಮವಾರ ಬರದೇ ಇದ್ದರೆ, ಸಂಪುಟ ವಿಸ್ತರಣೆ ನಂತರ ಅಣೆಕಟ್ಟೆಗೆ ಆಗಮಿಸಿ ಬಾಗಿನ ಅರ್ಪಿಸಲಿದ್ದಾರೆ.