ಕರ್ನಾಟಕ

karnataka

ETV Bharat / state

ಯುಪಿ ಸಿಎಂ​ಗೆ ಮದುವೆ ಆಗಿದ್ದರೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಆಗ್ತಿರಲಿಲ್ಲ: ಸಿಎಂ‌ ಇಬ್ರಾಹಿಂ

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ಗೆ ಮದುವೆ ಆಗಿದ್ದರೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಆಗ್ತಿರಲಿಲ್ಲ - ಹೆಂಡ್ತಿ‌, ಮಕ್ಕಳಿಲ್ಲದವರ ಕೈಗೆ ದೇಶ ಕೊಟ್ಟರೆ ಬೆಲೆ ಏರಿಕೆ ಆಗದೆ ಇನ್ನೇನು - ಜೆಡಿಎಸ್ ರಾಜ್ಯಾಧಕ್ಷ ಸಿಎಂ‌ ಇಬ್ರಾಹಿಂ ಟೀಕೆ

cm ibrahim
ಸಿಎಂ‌ ಇಬ್ರಾಹಿಂ

By

Published : Feb 26, 2023, 8:04 PM IST

ಮಂಡ್ಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಿಎಂ‌ ಇಬ್ರಾಹಿಂ

ಮಂಡ್ಯ: ರಾಜ್ಯದಲ್ಲಿ ಜೆಡಿಎಸ್‌ ಪರವಾದ ವಾತಾವರಣ ನಿರ್ಮಾಣವಾಗಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲಿಷ್ಠವಾಗಿದೆ. ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಆಗುತ್ತಿದೆ. ಎರಡು ಕಡೆ ಅತಿ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ ಎಂದು ಪಾಂಡವಪುರದಲ್ಲಿ ಜೆಡಿಎಸ್ ರಾಜ್ಯಾಧಕ್ಷ ಸಿ ಎಂ‌ ಇಬ್ರಾಹಿಂ ಹೇಳಿದರು.

ಮಾಧ್ಯಮದ ಜೊತೆ ಮಾತನಾಡಿದ ಅವರು, ಬಿಜೆಪಿಗೆ ಅಧಿಕಾರ ಇದೆ ಎಂದು ಜನ ಸೇರುತ್ತಿದ್ದಾರೆ. ಕರೆ ತಂದ ಜನಕ್ಕೆ ಮಾತನಾಡಿ ಪ್ರಯೋಜನವಿಲ್ಲ, ಬಂದ ಜನಕ್ಕೆ ಮಾತನಾಡಬೇಕು. ಜೆಡಿಎಸ್‌ ನಾಯಕರನ್ನು ಸೃಷ್ಟಿಸುವ ಪಕ್ಷ. ಪಂಚರತ್ನದ ರೀತಿ ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ಮಂಡ್ಯದಲ್ಲಿ ಬಿಜೆಪಿ ಗೆಲ್ಲುವುದು ಬರೀ ಕಲ್ಪನೆ ಎಂದರು.

ರಾಜ್ಯದಲ್ಲಿ ಬಿಜೆಪಿ ಉಳಿಸಲು ಮೋದಿ ಪ್ರಯತ್ನ ಮಾಡುತ್ತಿದ್ದಾರೆ. ಅದು ಸಾಧ್ಯವಿಲ್ಲ, ಬಿಜೆಪಿ ಕೇವಲ 70 ಸ್ಥಾನ ಕೂಡ ಗೆಲ್ಲುವುದಿಲ್ಲ. ವಯಸ್ಸಿನ ಕಾರಣ ನೀಡಿ ಯಡಿಯೂರಪ್ಪನವರನ್ನ ಶಾಶ್ವತವಾಗಿ ಮನೆಯಲ್ಲಿ ಕೂರಿಸಿದ್ರು. ಲಿಂಗಾಯತರ ಮತ ಪಡೆದು ಅಧಿಕಾರ ಪಡೆದ ಬಿಜೆಪಿ, ಪಂಚಮಸಾಲಿಗಳನ್ನ ಬೀದಿಗೆ ತಂದಿದೆ. ಬೇಡ, ಜಂಗಮರ ಕಡೆ ತಿರುಗಿ ನೋಡ್ತಿಲ್ಲ. 30 ವರ್ಷದಲ್ಲಿ ಗಂಡ ಸತ್ತರೆ ಮದುವೆ ಆಗಬಹುದು, 80 ವರ್ಷದಲ್ಲಿ ಗಂಡ ಸತ್ತರೆ ಮದುವೆ ಆಗಿ ಏನ್ ಮಾಡ್ತೀರಿ? ಎಂದು ವಿದಾಯದ ಬಳಿಕ ಲಿಂಗಾಯತರ ಬೆಂಬಲ ಕೇಳಿದ ಬಿಎಸ್‌ವೈ ವಿರುದ್ಧ ಇಬ್ರಾಹಿಂ ವ್ಯಂಗ್ಯವಾಡಿದ್ರು.

ರಾಜಕಾರಣಿಗಳ‌ ಕೆಲಸ ಧರ್ಮದ ಬಗ್ಗೆ ವಿಮರ್ಶೆ ಮಾಡುವುದಲ್ಲ. ಬಡವರ ಪರವಾಗಿ ಮತ್ತು ಅಭಿವೃದ್ಧಿ ಕುರಿತು ಮಾತನಾಡಬೇಕು. ಬಿಜೆಪಿಯವರಿಗೆ ಈ ಬಾರಿ ಹೀನಾಯ ಸೋಲಾಗಲಿದೆ. ಯಡಿಯೂರಪ್ಪ ಬಲವನ್ನ ಕುಗ್ಗಿಸಿದ್ದೇ ಬಿಜೆಪಿ. ಈ ಬಾರಿ ರಾಜ್ಯದ ಲಿಂಗಾಯತರು ಜೆಡಿಎಸ್‌ ಪರವಾಗಿದ್ದಾರೆ. ಕಾಂಗ್ರೆಸ್ ಲಿಸ್ಟ್ ಬಂದ ಮೇಲೆ 2ನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಕಿಚನ್ ಕ್ಯಾಬಿನೆಟ್ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿ ಟಿ ರವಿಯನ್ನು ಆರ್‌ಎಸ್‌ಎಸ್ ಯಾವ ಕ್ಯಾಬಿನೆಟ್‌ನಲ್ಲಿ ಇಟ್ಟಿದ್ದಾರೆ ಗೊತ್ತಾ?, ಆರ್‌ಎಸ್‌ಎಸ್ ಮೀಟಿಂಗ್‌ಗಳಲ್ಲಿ ರವಿಗೆ ಅವಕಾಶ ಇದೆಯಾ?. ರೈತರ ಮಕ್ಕಳಿಗೆ ಮರ್ಯಾದೆ ಇರೋದು ಜೆಡಿಎಸ್‌ ಪಕ್ಷದಲ್ಲಿ ಮಾತ್ರ. ಸ್ವಾಭಿಮಾನ ಇಲ್ಲದವರು ನೀವು, ಕಂಡವರ ಮನೆಯಲ್ಲಿ ಕೆಲಸ ಮಾಡಲು ಹೋಗಿದ್ದೀರಿ ಎಂದು ರವಿ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:'ಜೆಡಿಎಸ್‌ಗೆ ಸಿದ್ದರಾಮಯ್ಯ ಎಂಜಿನ್‌ ಆಗಿದ್ರು, ನಾನು ಸ್ಟೇರಿಂಗ್‌ ಆಗಿದ್ದೆ; ಈಗ ಇಬ್ರಾಹಿಂ ಖಾಲಿ ಬಸ್‌ನಲ್ಲಿ ಕುಳಿತಿದ್ದಾರೆ'

ಆದಿತ್ಯನಾಥ್ ವಿರುದ್ಧ ವಾಗ್ದಾಳಿ:ಉತ್ತರ ಪ್ರದೇಶದ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಮದುವೆ ಆಗಿದ್ದರೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಆಗ್ತಿರಲಿಲ್ಲ. ಹೆಂಡ್ತಿ‌, ಮಕ್ಕಳಿಲ್ಲದವರ ಕೈಗೆ ದೇಶ ಕೊಟ್ಟರೆ ಬೆಲೆ ಏರಿಕೆ ಆಗದೆ ಇನ್ನೇನು. ಲವ್ ಲವ್ ಅಂತಾವೇ, ಲವ್ ಅಂದ್ರೆ ಏನ್ ಗೊತ್ತು ಯೋಗಿಗೆ?. ಲವ್ ಮಾಡಿ ಎಲ್ಲರೂ ಮದುವೆ ಆಗ್ತಾರೆ. ಯೋಗಿಗೆ ಸಂಸಾರ ನಡೆಸುವ ಅನುಭವ ಇಲ್ಲ. ಹಾಗಾಗಿ, ಇಂತವರ ಕೈಗೆ ದೇಶ ಕೊಟ್ಟರೆ ಆಡಳಿತ ನಡೆಸಲು ಆಗಲ್ಲ ಎಂದು ಯೋಗಿ ಆದಿತ್ಯನಾಥ್ ವಿರುದ್ಧ ಮತ್ತೆ ಸಿ ಎಂ ಇಬ್ರಾಹಿಂ ನಾಲಿಗೆ ಹರಿಬಿಟ್ಟರು.

ಮಠಾಧಿಪತಿಗಳು ಧರ್ಮ ರಕ್ಷಕರು. ಅವರು ಗುರಿ ತೋರಿಸಬಹುದು, ಸಲಹೆ ಕೊಡಬಹುದು. ಆದರೆ, ಅವರೇ ನೇರವಾಗಿ ರಾಜಕೀಯ ಮಾಡಬಾರದು. ಅವರು ರಾಜಕೀಯಕ್ಕೆ ಬರುವುದು ಮಠದ ಸಂಸ್ಕೃತಿಗೆ ಅಪಮಾನ ಮಾಡಿದಂತೆ. ಯಾವ ಮಠಾಧೀಶರು ರಾಜಕೀಯಕ್ಕೆ ಬರುವುದಿಲ್ಲ. ಬಿಜೆಪಿ ಅವರೇ ವೇಷ ಹಾಕಿಸಿ ನಕಲಿ ಸ್ವಾಮೀಜಿಯನ್ನು ಕರೆತರಬಹುದು ಎಂದರು.

ಇದನ್ನೂ ಓದಿ:ಬೀದರ್: ಮಗನ ಗೆಲುವಿಗೆ ದರ್ಗಾದಲ್ಲಿ ಕಣ್ಣೀರು ಹಾಕಿದ ಸಿ ಎಂ ಇಬ್ರಾಹಿಂ

ಹಾಸನ ಟಿಕೆಟ್ ವಿಚಾರ: ಹಾಸನದ ಟಿಕೆಟ್ ಇನ್ನೂ ಅಂತಿಮವಾಗಿಲ್ಲ. ಈ ವಿಚಾರವಾಗಿ ಚರ್ಚೆ ಮಾಡಬೇಕು. ಭವಾನಿ ಅವರಿಗೆ ಟಿಕೆಟ್ ಕೇಳುವ ಹಕ್ಕಿದೆ, ಕೇಳ್ತಾರೆ. ರೇವಣ್ಣ ಅವರು ದೇವೇಗೌಡರು ಮತ್ತು ಇಬ್ರಾಹಿಂ ಕುಳಿತು ನಿರ್ಧಾರ ಮಾಡುತ್ತಾರೆ ಅಂತ ಹೇಳಿದ್ದಾರೆ. ಪಾರ್ಲಿಮೆಂಟ್ ಬೋರ್ಡ್ ಕೂಡ ಇದೆ. ಅಲ್ಲಿಗೆ ಇನ್ನೂ ಚರ್ಚೆಗೆ ಬಂದಿಲ್ಲ. ಎಲ್ಲರೂ ಕುಳಿತು ನಿರ್ಧಾರ ಮಾಡಬೇಕು. ರೇವಣ್ಣ, ಕುಮಾರಣ್ಣ, ರಮೇಶಣ್ಣ, ಬಾಲಣ್ಣ ಈ ನಾಲ್ವರು ಅಣ್ಣರ ಗಂಟು ಬಲವಾಗಿದೆ ಎಂದು ಇಬ್ರಾಹಿಂ ಸ್ಪಷ್ಟಪಡಿಸಿರು.

ABOUT THE AUTHOR

...view details