ಕರ್ನಾಟಕ

karnataka

ETV Bharat / state

ಅ.18ರಂದು ಮೈಶುಗರ್ ಸಕ್ಕರೆ ಕಾರ್ಖಾನೆ ಬಗ್ಗೆ ಅಂತಿಮ ನಿರ್ಣಯ: ಸಿಎಂ

ಮೈಶುಗರ್ ಕಾರ್ಖಾನೆ ಇತಿಹಾಸ ಹೊಂದಿದೆ. ಮಂಡ್ಯ ಅಂದ್ರೆ ಸಕ್ಕರೆ ನಾಡು, ಸಕ್ಕರೆ ನಾಡಿನಲ್ಲಿ ಈ ಕಾರ್ಖಾನೆ ಉಳಿಯಬೇಕು.‌ ಕಬ್ಬು ನುರಿಸಿದ್ರೆ ಮಾತ್ರ ಮಂಡ್ಯಕ್ಕೆ ಹೆಸರು ಎಂದು ಸಿಎಂ ಹೇಳಿದರು.

By

Published : Oct 15, 2021, 2:16 PM IST

cm-bommai-visits-farmers-protest-site-in-mandya
ಅ.18ರಂದು ಮೈಶುಗರ್ ಸಕ್ಕರೆ ಕಾರ್ಖಾನೆ ಬಗ್ಗೆ ಅಂತಿಮ ನಿರ್ಣಯ: ಬಸವರಾಜ ಬೊಮ್ಮಾಯಿ

ಮಂಡ್ಯ:ಮೈಶುಗರ್ ಕಾರ್ಖಾನೆ ಆರಂಭ ಕುರಿತು ಇದೇ ತಿಂಗಳ 18ರಂದು ನಿಮ್ಮೆಲ್ಲರನ್ನು ಕರೆಸಿ ಚರ್ಚಿಸಿ ಒಂದು ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರಿಗೆ ಭರವಸೆ ನೀಡಿದ್ದಾರೆ.

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಮೈಶುಗರ್ ಉಳಿವಿನ ರೈತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಿಎಂ ಬೊಮ್ಮಯಿ ಭೇಟಿ ನೀಡಿ ಮಾತನಾಡಿದರು. ಕಳೆದ ಬಾರಿ ಧರಣಿ ಸ್ಥಳಕ್ಕೆ ಬರಬೇಕಿತ್ತು, ಆದ್ರೆ ಬರಲಾಗಲಿಲ್ಲ, ಮನವಿ ಕೊಡುತ್ತೀರಿ ಎಂದು ಮೈಸೂರಿಗೆ ತೆರಳುವ ವೇಳೆ ಇಲ್ಲಿಗೆ ಬಂದಿದ್ದೇನೆ ಎಂದರು.

ಅ.18ರಂದು ಮೈಶುಗರ್ ಸಕ್ಕರೆ ಕಾರ್ಖಾನೆ ಬಗ್ಗೆ ಅಂತಿಮ ನಿರ್ಣಯ: ಬಸವರಾಜ ಬೊಮ್ಮಾಯಿ

ಮೈಶುಗರ್ ಕಾರ್ಖಾನೆ ಇತಿಹಾಸ ಹೊಂದಿದೆ. ಮಂಡ್ಯ ಅಂದ್ರೆ ಸಕ್ಕರೆ ನಾಡು, ಸಕ್ಕರೆ ನಾಡಿನಲ್ಲಿ ಈ ಕಾರ್ಖಾನೆ ಉಳಿಯಬೇಕು.‌ ಕಬ್ಬು ನುರಿದರೆ ಮಾತ್ರ ಮಂಡ್ಯಕ್ಕೆ ಹೆಸರು. ರೈತರ ಕಬ್ಬು ನುರಿಸುವ ಕೆಲಸ ಆಗಬೇಕು. ಹೀಗಾಗಿ ನಾವೆಲ್ಲರೂ ಇದೇ 18 ರಂದು ಸೇರಿ ಒಂದು ನಿರ್ಧಾರಕ್ಕೆ ಬರೋಣ ಎಂದು ಹೇಳಿದರು.

ಇದನ್ನೂ ಓದಿ:ಮೈಸೂರು ದಸರಾ: ಕಲಾವಿದರೊಂದಿಗೆ ಹೆಜ್ಜೆ ಹಾಕಿದ ಸಚಿವ ಎಸ್​​.ಟಿ.ಸೋಮಶೇಖರ್

ABOUT THE AUTHOR

...view details