ಕರ್ನಾಟಕ

karnataka

ETV Bharat / state

ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳ ಬಂಧನ: ಸಿಎಂ - ಸಿಎಂ ಬೊಮ್ಮಾಯಿ

ಪ್ರವೀಣ್​ ನೆಟ್ಟಾರು ಹತ್ಯೆ ಸಂಬಂಧ ಬಂಧನವಾಗಿರುವ ಮೂವರು ಕೂಡ ಪ್ರಮುಖ ಆರೋಪಿಗಳು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಸ್ಥಳ ಪರಿಶೀಲನೆಗೆ ಕರೆತಂದಿದ್ದ ಮೂವರು ಪ್ರಮುಖ ಆರೋಪಿಗಳೇ... ಸಿಎಂ ಬೊಮ್ಮಾಯಿ
ಸ್ಥಳ ಪರಿಶೀಲನೆಗೆ ಕರೆತಂದಿದ್ದ ಮೂವರು ಪ್ರಮುಖ ಆರೋಪಿಗಳೇ... ಸಿಎಂ ಬೊಮ್ಮಾಯಿ

By

Published : Aug 11, 2022, 8:30 PM IST

Updated : Aug 11, 2022, 8:51 PM IST

ಮಂಡ್ಯ: ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇವರು ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಕೃತ್ಯದ ಹಿಂದೆ ಯಾರಿದ್ದಾರೆ ಅನ್ನೋದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳ ಬಂಧನ

ಹೈಕೋರ್ಟ್​ನಿಂದ ಎಸಿಬಿ ಕುರಿತ ತೀರ್ಪು ವಿಚಾರದ ಬಗ್ಗೆ ಮಾತನಾಡಿ, ಇದು ಈಗಷ್ಟೇ ನನ್ನ ಗಮನಕ್ಕೆ ಬಂದಿದೆ. ನಾನು ಇಲ್ಲಿದ್ದೀನಿ. ಬೆಂಗಳೂರಿಗೆ ಹೋದ ತಕ್ಷಣ ಎಜಿ ಸೇರಿದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಕರೆಸಿ ಮಾತನಾಡಿ ನಂತರ ಪ್ರತಿಕ್ರಿಯಿಸುವೆ ಎಂದರು.

ರೈತರ ಪರ ಮಾತು ಕೆಲವರಿಗೆ ಭಾಷಣದ ಸರಕು: ರೈತರ ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇವರಿಗಿಲ್ಲ. ಆದರೆ ನಮ್ಮ ಸರ್ಕಾರ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡಬಾರದೆಂದು ನಿರ್ಧರಿಸಿ ಮೈಷುಗರ್ ಕಾರ್ಖಾನೆ ಆರಂಭಿಸುವ ಮೂಲಕ ನುಡಿದಂತೆ ನಡೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೆಡಿಎಸ್ ಪಕ್ಷಗಳ ಹೆಸರು ಹೇಳದೆ ತಿರುಗೇಟು ನೀಡಿದ್ದಾರೆ.

ಮಂಡ್ಯ ನಗರದ ವಿಶ್ವ ವಿದ್ಯಾಲಯದ ಆವರಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಡೆದ ಮಂಡ್ಯ ವಿಶ್ವ ವಿದ್ಯಾಲಯದ ವಿಧ್ಯುಕ್ತ ಚಾಲನೆ ಹಾಗೂ ನೂತನ ಕಟ್ಟಡಗಳ ಉದ್ಘಾಟನೆ, ಲೋಗೋ ಅನಾವರಣ ಹಾಗೂ ಸಂಜೀವಿನಿ ಸಾಮರ್ಥ್ಯ-ಜೀವನೋಪಾಯ ವರ್ಷ 2022-23 ರ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕೆಲವರಿಗೆ ರೈತರ ಪರವಾಗಿ ಮಾತನಾಡುವುದು ಭಾಷಣದ ಸರಕಾಗಿದೆ

ಕೆಲವರಿಗೆ ಸಾಮಾಜಿಕ ನ್ಯಾಯ ಎನ್ನುವುದು ಭಾಷಣದ ಸರಕಾಗಿದೆ. ಹಲವಾರು ದಶಗಳಿಂದ ಯಾರು ಕೆಲಸ ಮಾಡುತ್ತಿದ್ದಾರೆ, ಯಾರು ಈ ರೀತಿ ಮಾತನಾಡುತ್ತಿದ್ದಾರೆ ಎಂಬುದು ಮಂಡ್ಯ ಜನರಿಗೆ ಗೊತ್ತಿದೆ. ಕೇವಲ ಮಾತಿನಿಂದ ಮೋಸ ಮಾಡಲು ಸಾಧ್ಯವಿಲ್ಲ. ನುಡಿದಂತೆ ನಡೆದವರಿಗೆ ಈಗ ಕಾಲ. ಅದರಂತೆ ನಮ್ಮ ಸರ್ಕಾರ ನುಡಿದಂತೆ ಮೈಷುಗರ್ ಪ್ರಾರಂಭಿಸಿ ಜಿಲ್ಲೆಯ ರೈತರ ಪರವಾಗಿ ನಿಂತಿದೆ ಎಂದು ಹೇಳಿದರು.

ಇದನ್ನೂ ಓದಿ:ಪ್ರವೀಣ್ ಹತ್ಯೆ ಪ್ರಕರಣ: ಸ್ಥಳ ಮಹಜರು ಮಾಡಿದ ಸುಳ್ಯ ಪೊಲೀಸರು

Last Updated : Aug 11, 2022, 8:51 PM IST

ABOUT THE AUTHOR

...view details