ಮಂಡ್ಯ: ಸಕ್ಕರೆನಾಡಿನ ಜೀವನಾಡಿ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾದಾಗ ರಾಜ್ಯದ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುವುದು ವಾಡಿಕೆ. ಆದರೆ ಈ ಬಾರಿ ಕೆಆರ್‌ಎಸ್ ತುಂಬುವುದು ಅನುಮಾನವಾಗಿದೆ. ಹಾಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಾಗಿನ ಅರ್ಪಿಸುವ ಭಾಗ್ಯ ಸಿಗುವುದು ಡೌಟು.
ಹೌದು, ಕಳೆದ ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಿ ಕೆಆರ್‌ಎಸ್ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿತ್ತು. ಅಲ್ಲದೆ, 124.80 ಅಡಿ ಗರಿಷ್ಠ ಮಟ್ಟದ ಜಲಾಶಯ ಆಗಸ್ಟ್ 11 ರಂದು 121 ಅಡಿಗೆ ತಲುಪಿತ್ತು. ಆದ್ರೆ ಜಲಾಶಯದಿಂದ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ನೀರು ಕುಸಿದು 114.20 ಅಡಿಗೆ ಬಂದು ತಲುಪಿದೆ.
ಸೆಪ್ಟಂಬರ್‌ನಲ್ಲಿ ಜಲಾಶಯ ತುಂಬಿದ್ದು ಕಡಿಮೆ:
ಜೂನ್, ಜುಲೈ, ಆಗಸ್ಟ್‌ನಲ್ಲಿ ಸುರಿಯುವ ಮಳೆಗೆ ಜಲಾಶಯ ತುಂಬಿರುವುದೇ ಹೆಚ್ಚು. ಆದ್ರೆ ಸೆಪ್ಟಂಬರ್‌ನಲ್ಲಿ ಮಳೆ ಕಡಿಮೆಯಾಗುವ ಹಿನ್ನೆಲೆಯಲ್ಲಿ ಜಲಾಶಯ ತುಂಬಿದ್ದು ಕಡಿಮೆ. ಕಳೆದ 12 ವರ್ಷಗಳ ಜಲಾಶಯ ತುಂಬಿದ ಮಾಹಿತಿಯಂತೆ 2012 ಸೆ.15 ರಂದು 110.63 ಅಡಿ ತುಂಬಿತ್ತು. ನಂತರ 2015ರ ನವೆಂಬರ್ 15 ರಂದು 111 ಅಡಿ ನೀರು ಸಂಗ್ರಹವಾಗಿದ್ದು, ಬಿಟ್ಟರೆ ಸೆಪ್ಟಂಬರ್‌ನಲ್ಲಿ ಇದುವರೆಗೂ ಜಲಾಶಯ ತುಂಬಿಲ್ಲ.
ತಂದೆಗೂ ತಪ್ಪಿದ್ದ ಅವಕಾಶ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರು ಸಹ ಮುಖ್ಯಮಂತ್ರಿಯಾಗಿದ್ದ ವೇಳೆ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸುವ ಅವಕಾಶದಿಂದ ವಂಚಿತರಾಗಿದ್ದರು. 1988 ರಲ್ಲಿ ಕೆಆರ್‌ಎಸ್ ಜಲಾಶಯ ತುಂಬಿತ್ತು. ಆದರೆ ಅಂದು ಕಾರಣಾಂತರಗಳಿಂದ ಬಾಗಿನ ಅರ್ಪಿಸಲು ಸಾಧ್ಯವಾಗಿಲ್ಲ. ಆದ್ರೆ ಅಂದಿನ ರಾಜ್ಯಪಾಲರಾಗಿದ್ದ ಪಿ.ವೆಂಕಟಸುಬ್ಬಯ್ಯ ಅವರು ಬಾಗಿನ ಅರ್ಪಿಸಿದ್ದರು.
ನಂತರ 1989ರಲ್ಲಿ ಸರ್ಕಾರದ ಬದಲಾವಣೆಯಿಂದ ವಿರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದರು. ಈ ಮಧ್ಯೆ 12 ಬಾರಿ ನಾನಾ ಕಾರಣಗಳಿಂದ ಹಾಗೂ ಅಣೆಕಟ್ಟೆ ತುಂಬದ ಪರಿಣಾಮ ಡ್ಯಾಂಗೆ ಬಾಗಿನ ಅರ್ಪಿಸುವ ಕಾರ್ಯ ನಡೆದಿಲ್ಲ. 1979 ರಿಂದ ಮುಖ್ಯಮಂತ್ರಿಯಾದವರ ಪೈಕಿ ಎಸ್.ಆರ್.ಬೊಮ್ಮಾಯಿ ಹಾಗೂ ಜಗದೀಶ್‌ಶೆಟ್ಟರ್‌ಗೆ ಬಾಗಿನ ಅರ್ಪಿಸುವ ಅವಕಾಶ ಕೈ ತಪ್ಪಿದೆ.
ತಮಿಳುನಾಡಿಗೆ ನೀರು ಹರಿಸುವುದು ಅನಿವಾರ್ಯ: