ಕರ್ನಾಟಕ

karnataka

ETV Bharat / state

ಅಧಿಕಾರಿಗಳ ನಿರ್ಲಕ್ಷ್ಯ ಆರೋಪ... ನಿವೇಶನ ಕಳೆದುಕೊಳ್ಳುವ ಭೀತಿಯಲ್ಲಿ ಪೌರ ಕಾರ್ಮಿಕರು! - ಪೌರ ಕಾರ್ಮಿಕರು

8 ಕುಟುಂಬಕ್ಕೆ ಮಾತ್ರ ಹಕ್ಕುಪತ್ರ ನೀಡಿ, ಉಳಿಕೆ ಜಾಗದ ಹಕ್ಕನ್ನು ಗ್ರಾಮದ ಕೆಲವರಿಗೆ ನೀಡಿದ್ದಾರಂತೆ. ಹೀಗಾಗಿ ಜಾಗದ ಹಕ್ಕು ಪಡೆದವರು ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರಂತೆ‌. ಇದರಿಂದ ವಿಚಲಿತಗೊಂಡ ಕುಟುಂಬಗಳು ಈಗ ನ್ಯಾಯಕ್ಕಾಗಿ ಅಲೆದಾಡುತ್ತಿವೆ.

ನಿವೇಶನ ಕಳೆದುಕೊಳ್ಳುವ ಭೀತಿಯಲ್ಲಿ ಪೌರ ಕಾರ್ಮಿಕರು

By

Published : Jun 7, 2019, 5:00 PM IST

ಮಂಡ್ಯ: ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಹೆಚ್.ಡಿ‌ ಚೌಡಯ್ಯ ಬಡಾವಣೆಯಲ್ಲಿ ವಾಸವಾಗಿರುವ ಪೌರ ಕಾರ್ಮಿಕರು ನಿವೇಶನ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದು, ಈ ಬಡಪಾಯಿಗಳ ಗೋಳು ಅಧಿಕಾರಿಗಳಿಗೆ ಮುಟ್ಟದಂತಾಗಿದೆ.

ಹೌದು, ಸ್ವಚ್ಚತಾ ಕಾರ್ಮಿಕರಾಗಿ ಆಗಮಿಸಿದ್ದ 16 ಕುಟುಂಬಗಳಿಗೆ ಚೌಡಯ್ಯ ಬಡಾವಣೆಯಲ್ಲಿ ನಿವೇಶನ ನೀಡಲಾಗಿತ್ತು. ಆದರೆ, ಇನ್ನೂ ಹಕ್ಕುಪತ್ರ ನೀಡಿರಲಿಲ್ಲ. ಇದನ್ನೇ ದುರುಪಯೋಗ ಪಡಿಸಿಕೊಂಡ ಕೆಲವರು ನಿವೇಶನದ ಹಕ್ಕು ಸಂಪಾದಿಸಿದ್ದಾರೆ. ಇದರಿಂದ ಮೂರು ದಶಕಗಳಿಂದ ವಾಸ ಮಾಡುತ್ತಿದ್ದ 8 ಕುಟುಂಬಗಳು ಈಗ ಜಾಗ ಖಾಲಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನಿವೇಶನ ಕಳೆದುಕೊಳ್ಳುವ ಭೀತಿಯಲ್ಲಿ ಪೌರ ಕಾರ್ಮಿಕರು

ಗ್ರಾಮ ಪಂಚಾಯಿತಿ ಅಧಿಕಾರಿಗಳು 16 ಕುಟುಂಬಗಳಲ್ಲಿ 8 ಕುಟುಂಬಕ್ಕೆ ಮಾತ್ರ ಹಕ್ಕುಪತ್ರ ನೀಡಿ, ಉಳಿಕೆ ಜಾಗದ ಹಕ್ಕನ್ನು ಗ್ರಾಮದ ಕೆಲವರಿಗೆ ನೀಡಿದ್ದಾರಂತೆ. ಹೀಗಾಗಿ ಜಾಗದ ಹಕ್ಕು ಪಡೆದವರು ಖಾಲಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರಂತೆ‌. ಇದರಿಂದ ವಿಚಲಿತಗೊಂಡ ಕುಟುಂಬಗಳು ಈಗ ನ್ಯಾಯಕ್ಕಾಗಿ ಅಲೆದಾಡುತ್ತಿವೆ.

ಇನ್ನಾದರೂ ಸರ್ಕಾರ ಹಾಗೂ ಜನ ಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಸರ್ಕಾರ ಗುಡಿಸಲು ಮುಕ್ತ ಅನ್ನುತ್ತಿದೆ. ಆದರೆ, ಸ್ಥಳೀಯ ಆಡಳಿತ ನಿವೇಶನ ಮುಕ್ತ ಮಾಡಲು ಹೊರಟಿದ್ದು, ಇದಕ್ಕೆ ಬ್ರೇಕ್ ಹಾಕಬೇಕಾಗಿದೆ.

ABOUT THE AUTHOR

...view details