ಮಂಡ್ಯ:ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿಯ ಜೊತೆಗೆ ಕಲೆಗಳ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮ ಮದ್ದೂರು ಪಟ್ಟಣದಲ್ಲಿ ನಡೆಯಿತು.
ಮಕ್ಕಳ ಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು.. - ಮಕ್ಕಳ ಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಶಿಕ್ಷಣ ಇಲಾಖೆ ವತಿಯಿಂದ ಮದ್ದೂರು ಪಟ್ಟಣದಲ್ಲಿ ನಡೆದ ಮಕ್ಕಳ ಹಬ್ಬ ಮತ್ತು ಪುಟಾಣಿ ಪೊಲೀಸ್ ಕಾರ್ಯಕ್ರಮದಲ್ಲಿ ಮಕ್ಕಳು ಡೊಳ್ಳು ಕುಣಿತ, ಪಟ ಕುಣಿತ ಮಾಡಿ ಸಂಭ್ರಮಿಸಿದರು.
ಮಕ್ಕಳ ಹಬ್ಬ
ಶಿಕ್ಷಣ ಇಲಾಖೆ ವತಿಯಿಂದ ನಡೆದ ಮಕ್ಕಳ ಹಬ್ಬ ಮತ್ತು ಪುಟಾಣಿ ಪೊಲೀಸ್ ಕಾರ್ಯಕ್ರಮಕ್ಕೆ ಬಿಇಒ ಮಹದೇವು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳು ಡೊಳ್ಳು ಕುಣಿತ, ಪಟ ಕುಣಿತ ಸೇರಿ ಪೂರ್ಣಕುಂಭ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಜೊತೆಗೆ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯ ಪ್ರಾತ್ಯಕ್ಷಿತೆ ನಡೆಸಿದರು.
ವಿದ್ಯಾರ್ಥಿಗಳ ಹಬ್ಬವು ಪೋಷಕರು ಮತ್ತು ಅಧಿಕಾರಿಗಳ ಗಮನ ಸೆಳೆಯಿತು. ಮಕ್ಕಳಲ್ಲಿ ಜಾನಪದ ಕಲೆಗಳ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.