ಮಂಡ್ಯ: ಇದೀಗ ಎಲ್ಲ ವ್ಯವಹಾರಗಳು ಆನ್‌ಲೈನ್ ಮಯವಾಗಿದೆ. ವ್ಯಾಪಾರ ವಹಿವಾಟು ಎಲ್ಲವೂ ಬೆರಳ ತುದಿಗೆ ಬಂದು ನಿಂತಿದೆ. ಆದರೆ, ಆ ಉತ್ಪನ್ನ ಯಾವ ದೇಶದ್ದು ಎಂಬುದು ಮಾತ್ರ ಗ್ರಾಹಕರಿಗೆ ಗೊತ್ತಾಗುವುದಿಲ್ಲ. ಹೀಗಾಗಿ ಯಾವ ಉತ್ಪನ್ನ ಯಾವ ದೇಶದಲ್ಲಿ ಉತ್ಪಾದನೆ ಆಗಿದೆ ಎಂಬ ಮಾಹಿತಿ ತಿಳಿಯಲು ಮೂವರು ಯುವ ಟೆಕ್ಕಿಗಳು ಹೊಸ ಸಾಫ್ಟ್‌ವೇರ್ ಶೋಧಿಸಿದ್ದಾರೆ.
ಶ್ರೀರಂಗಪಟ್ಟಣದ ಮಹಮದ್ ಸುಹೇಲ್ ಹಾಗೂ ಈತನ ಸಹಪಾಠಿಗಳಾದ ಮಂಗಳೂರಿನ ಸ್ವಸ್ತಿಕ್ ಪದ್ಮ, ಬೆಂಗಳೂರಿನ ಪ್ರಣವ್ ಶಿಖರ್ ಪುರ್ ಶೋಚ್ ಸ್ವದೇಶಿ ಸಾಫ್ಟ್‌ವೇರ್ ಬರೆದಿದ್ದಾರೆ. ನಿಮ್ಮ ಕ್ರೋಮ್ ಇಂಟರ್‌ನೆಟ್ ಬ್ರೌಸರ್ನಿಂದ ಈ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಿಕೊಂಡರೆ ನೀವು ಯಾವುದೇ ಆನ್‌ಲೈನ್ ಸ್ಟೋರ್‌ಗೆ ಹೋಗಿ ವಸ್ತು ಖರೀದಿ ಮಾಡಲು ಮುಂದಾದಾಗ ಈ ಬಗ್ಗೆ ಸರ್ಚ್ ಮಾಡಿದರೆ ಸಾಕು ಅದರ ಸಂಪೂರ್ಣ ವಿವರವನ್ನು ನೀಡಲಿದೆ. ಆ ವಸ್ತು ಎಲ್ಲಿ ಉತ್ಪಾದನೆ ಆಗಿದೆ. ಭಾರತದಲ್ಲಿ ಕೇವಲ ಅಸೆಂಬಲ್ ಮಾಡಲಾಗಿದೆಯಾ ಅಥವಾ ಅದು ಮೇಡ್ ಇನ್ ಇಂಡಿಯಾದ ವಸ್ತುವೇ ಎಂಬುದು ನಿಮಗೆ ಡಿಸ್‌ಪ್ಲೇ ಆಗಲಿದೆ.