ಮಂಡ್ಯ :108ರ ಆ್ಯಂಬುಲೆನ್ಸ್ ಸಿಬ್ಬಂದಿಯೇ ಮಧ್ಯರಾತ್ರಿ ಆಸ್ಪತ್ರೆ ಮಾರ್ಗ ಮಧ್ಯೆ ಹೆರಿಗೆ ಮಾಡಿಸಿದ ಘಟನೆ ಮೈಸೂರು ಹೊರ ವಲಯದಲ್ಲಿ ನಡೆದಿದೆ.
ಆ್ಯಂಬುಲೆನ್ಸ್ನಲ್ಲಿಯೇ ಹೆರಿಗೆ ಮಾಡಿಸಿದ 108ರ ಸಿಬ್ಬಂದಿ; ತಾಯಿ-ಮಗು ಸುರಕ್ಷಿತ.. - ತಾಯಿ-ಮಗು ಸುರಕ್ಷಿತ
ಕಳೆದ ರಾತ್ರಿ ಬನ್ನೂರಿನಲ್ಲಿ ನಿಗಧಿತ ಆ್ಯಂಬುಲೆನ್ಸ್ ಲಭ್ಯವಿಲ್ಲದ ಕಾರಣ, ಅರಕೆರೆ 108ರ ಸಿಬ್ಬಂದಿಗೆ ಪ್ರಕರಣವನ್ನು ವಹಿಸಲಾಗಿತ್ತು. ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಹೆರಿಗೆ ಆಗಿದೆ.

ಶ್ರೀರಂಗಪಟ್ಟಣ ತಾಲೂಕಿನ ಅರಕೆರೆಯ 108ರ ಸ್ಟಾಫ್ನರ್ಸ್ ಹರೀಶ್ ಹಾಗೂ ಚಾಲಕ ಸಿದ್ದಪ್ಪ ಸಹಾಯದಿಂದ ಟಿ.ನರಸಿಪುರ ತಾಲೂಕಿನ ರಂಗನಾಥ ಹುಂಡಿ ಗ್ರಾಮದ ಚೈತ್ರ ಎಂಬ ಗರ್ಭಿಣಿಗೆ ಮಧ್ಯರಾತ್ರಿ 2ರ ಸಮಯದಲ್ಲಿ ಹೆರಿಗೆ ಮಾಡಿಸಿದ್ದಾರೆ. ಬಾಣಂತಿ ಹಾಗೂ ಮಗು ಆರೋಗ್ಯವಾಗಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಕಳೆದ ರಾತ್ರಿ ಬನ್ನೂರಿನಲ್ಲಿ ನಿಗಧಿತ ಆ್ಯಂಬುಲೆನ್ಸ್ ಲಭ್ಯವಿಲ್ಲದ ಕಾರಣ, ಅರಕೆರೆ 108ರ ಸಿಬ್ಬಂದಿಗೆ ಪ್ರಕರಣವನ್ನು ವಹಿಸಲಾಗಿತ್ತು. ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಹೆರಿಗೆ ಆಗಿದೆ. ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.