ಮಂಡ್ಯ: ಉಪ ಚುನಾವಣೆಯಲ್ಲಿ ಕಾಳಧನದ್ದೇ ಕಾರುಬಾರು ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಚೆಕ್ ಪೋಸ್ಟ್ ಗಳ ಪರಿಶೀಲನೆಗೆ ನಿಂತು, ಖುದ್ದು ವಾಹನ ಸವಾರರ ತಪಾಸಣೆ ನಡೆಸಿದರು.
ಚೆಕ್ ಪೋಸ್ಟ್ ತಪಾಸಣೆಗೆ ಬಂದ ಮಂಡ್ಯ ಡಿಸಿ... 7 ಲಕ್ಷ ನಗದು ವಶ - ಚೆಕ್ ಪೋಸ್ಟ್ ತಪಾಸಣೆ ಸುದ್ದಿ
ಉಪ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಅವರು ಚೆಕ್ ಪೋಸ್ಟ್ ಬಳಿ ತೆರಳಿ ವಾಹನ ಸವಾರರನ್ನು ಖುದ್ದಾಗಿ ತಾವೇ ತಪಾಸಣೆ ನಡೆಸಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಲ್ಲೇನಹಳ್ಳಿ, ಕಳಸ್ತವಾಡಿ ಚೆಕ್ ಪೋಸ್ಟ್ಗಳಿಗೆ ಭೇಟಿ ನೀಡಿ ಡಿಸಿ ಪರಿಶೀಲನೆ ಮಾಡಿದರು. ಚೆಕ್ ಪೋಸ್ಟ್ಗಳ ನಂತರ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ, ತಯಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
7 ಲಕ್ಷ ನಗದು ವಶ: ಕೆ.ಆರ್.ಪೇಟೆ ತಾಲೂಕಿನ ಬಲ್ಲೇನಹಳ್ಳಿ ಚೆಕ್ ಪೋಸ್ಟ್ನಲ್ಲಿ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷ ರೂಪಾಯಿ ನಗದನ್ನು ಚೆಕ್ ಪೋಸ್ಟ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಅರೇನಹಳ್ಳಿ ಗ್ರಾಮದಲ್ಲಿ 2.25 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದು ಕಾರಿನ ಮಾಲೀಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಎರಡೂ ಪ್ರಕರಣ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿವೆ.