ಕರ್ನಾಟಕ

karnataka

ETV Bharat / state

ಹೆಚ್​​ಡಿಕೆ ಸಿಎಂ ಭೇಟಿಯನ್ನು ವ್ಯಂಗ್ಯವಾಡಿದ ಚಲುವರಾಯಸ್ವಾಮಿ - ಹೆಚ್​​ಡಿಕೆ ಸಿಎಂ ಭೇಟಿ

ಬೆಳಗ್ಗೆ ಯಡಿಯೂರಪ್ಪ, ನಾಳೆ ಸಿದ್ದರಾಮಯ್ಯ, ನಾಡಿದ್ದು ಸೋನಿಯಾ ಗಾಂಧಿಯವರನ್ನು ಬೇಕಾದ್ರೂ ಮಾಜಿ ಸಿಎಂ ಹೆಚ್​​ಡಿಕೆ ಭೇಟಿಯಾಗಬಹುದು ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

Chaluvaraya Swamy reaction on HDK -BSY Meet
ಮಾಜಿ ಸಚಿವ ಚಲುವರಾಯಸ್ವಾಮಿ

By

Published : Sep 11, 2020, 2:57 PM IST

ಮಂಡ್ಯ:ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದನ್ನು ಮಾಜಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದು, ಅವರೇ ಆ ಪಕ್ಷಕ್ಕೆ ಹೈಕಮಾಂಡ್. ಅವರೇ ತೀರ್ಮಾನ ಮಾಡಲು ಸ್ವತಂತ್ರರು ಎಂದಿದ್ದಾರೆ.

ಸಿಎಂ ಬಿಎಸ್​ವೈ ಅವರನ್ನು ಭೇಟಿಯಾಗಿರುವುದು ಕುಮಾರಸ್ವಾಮಿಯವರ ವೈಯಕ್ತಿಕ ವಿಚಾರ. ಅವರದ್ದು ಪ್ರಾದೇಶಿಕ ಪಕ್ಷ. ಹೀಗಾಗಿ ಏನೇ ತೀರ್ಮಾನ ತೆಗೆದುಕೊಂಡರೂ ಅವರದ್ದೇ ಅಂತಿಮ. ಆ ಪಕ್ಷಕ್ಕೆ ಅವರೇ ರಾಜ್ಯ ನಾಯಕರು. ಅವರೇ ಹೈಕಮಾಂಡ್ ಎಂದು ಚಲುವರಾಯಸ್ವಾಮಿ ಹೇಳಿದರು.

ಮಾಜಿ ಸಚಿವ ಚಲುವರಾಯಸ್ವಾಮಿ

ಬೆಳಿಗ್ಗೆ ಯಡಿಯೂರಪ್ಪ, ನಾಳೆ ಸಿದ್ದರಾಮಯ್ಯ, ನಾಡಿದ್ದು ಸೋನಿಯಾ ಗಾಂಧಿಯವರನ್ನು ಬೇಕಾದ್ರೂ ಭೇಟಿಯಾಗಬಹುದು. ಅವರು ಏನು ಹೇಳಲಿಕ್ಕೂ ಸ್ವತಂತ್ರರಿದ್ದಾರೆ. ಒಮ್ಮೆ ಸರ್ಕಾರವನ್ನೂ ತೆಗಳಬಹುದು, ಮತ್ತೊಮ್ಮೆ ಅದೇ ಸರ್ಕಾರದ ಮಂತ್ರಿಗಳನ್ನು ಭೇಟಿ ಮಾಡಬಹುದು. ಇದೇನು ಹೊಸದೇನಲ್ಲ ಅಲ್ವಾ ಎಂದರು.

ABOUT THE AUTHOR

...view details