ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿರುಸಿನ ಪ್ರಚಾರ ಇಂದೂ ಕೂಡಾ ಮುಂದುವರೆದಿದೆ. ಕೈ ನೋವಿದ್ದರೂ ದರ್ಶನ್ ಅದನ್ನು ಲೆಕ್ಕಿಸದೆ ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ.
ವಿಕಲಚೇತನ ಅಭಿಮಾನಿ ಜೊತೆ ದರ್ಶನ್ ಸೆಲ್ಫಿ: ದಚ್ಚು ಸರಳತೆಗೆ ಅಭಿಮಾನಿ ಫುಲ್ಖುಷ್ - undefined
ಮಳವಳ್ಳಿ ಬಳಿ ಚುನಾವಣಾ ಪ್ರಚಾರದ ವೇಳೆ ತಮ್ಮಗೆ ಎದುರಾದ ವಿಕಲಚೇತನ ಅಭಿಮಾನಿ ಬಳಿ ಹೋದ ದರ್ಶನ್ ಅವರ ಮೊಬೈಲ್ ಪಡೆದು ತಾವೇ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ದರ್ಶನ್ ಸರಳತೆಗೆ ಅಭಿಮಾನಿ ಬಹಳ ಖುಷಿಯಾಗಿದ್ದಾರೆ.
ಮಂಡ್ಯದ ಸುತ್ತಮುತ್ತಲ ಹಳ್ಳಿಗಳಲ್ಲಿ ಯಜಮಾನ ಭರ್ಜರಿ ಕ್ಯಾಂಪಸ್ ಮಾಡುತ್ತಿದ್ದಾರೆ. ದರ್ಶನ್ ಹೋದ ಕಡೆಯೆಲ್ಲಾ ಸಾವಿರಾರು ಅಭಿಮಾನಿಗಳಿಂದ ಭವ್ಯ ಸ್ವಾಗತ ಸಿಗುತ್ತಿದೆ. ಅಭಿಮಾನಿಗಳನ್ನೂ ಅಷ್ಟೇ ಗೌರವಿಸುವ ದರ್ಶನ್ ಇಂದು ತಮ್ಮ ವಿಕಲಚೇತನ ಅಭಿಮಾನಿಯೊಬ್ಬರ ಅಭಿಮಾನಕ್ಕೆ ಮನಸೋತಿದ್ದಾರೆ.
ಮಳವಳ್ಳಿ ಬಳಿ ಪ್ರಚಾರದ ವೇಳೆ ದರ್ಶನ್ಗೆ ಸ್ಕೂಟರ್ ಮೇಲೆ ಬಂದ ವಿಕಲಚೇತನ ಅಭಿಮಾನಿಯೊಬ್ಬರು ಎದುರಾದರು. ಆ ಅಭಿಮಾನಿ ದರ್ಶನ್ ಜೊತೆಗೆ ಒಂದು ಫೋಟೋ ಕೇಳಿದ್ದಾರೆ. ಈ ವೇಳೆ ವಾಹನದಿಂದ ಕೆಳಗಿಳಿದ ದರ್ಶನ್ ತಾವೇ ಆ ಅಭಿಮಾನಿ ಬಳಿ ಹೋಗಿ ಅವರ ಮೊಬೈಲ್ ಪಡೆದು ಕ್ಯಾಮರಾ ಓಪನ್ ಮಾಡಿ ತಾವೇ ಸೆಲ್ಫಿ ಕ್ಲಿಕ್ಕಿಸಿ ಅಭಿಮಾನಿ ಕೈ ಕುಲುಕಿದ್ದಾರೆ. ನಂತರ ಸುಮಲತಾ ಅವರಿಗೆ ವೋಟ್ ಮಾಡಲು ಮನವಿ ಮಾಡಿದ್ದಾರೆ. ದರ್ಶನ್ ಅವರ ಸರಳತೆಗೆ ಅಭಿಮಾನಿ ಸಂತೋಷ ವ್ಯಕ್ತಪಡಿಸಿದ್ದಾರೆ.