ಮಂಡ್ಯ:ಅರ್ಧ ಕೆಜಿ ಚಿನ್ನ ಅಡಮಾನ ಮಾಡಿಸಿಕೊಂಡು ಹೆಚ್ಚು ಬಡ್ಡಿ ಕೊಡುವುದಾಗಿ ಫೆಡ್ ಬ್ಯಾಂಕ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸೋಮಶೇಖರ್ ನಂಬಿಸಿ ಮೋಸ ಮಾಡಿದ್ದಾರೆ ಎಂದು ವಂಚನೆಗೊಳಗಾಗಿರುವ ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಆರೋಪಿಸಿದರು.
ಹೆಚ್ಚು ಬಡ್ಡಿ ಕೊಡಿಸುವುದಾಗಿ ಹೇಳಿ ವಂಚನೆ: ಮಂಡ್ಯ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಆರೋಪ - ಮಂಡ್ಯ ಅಪರಾಧ ಸುದ್ದಿ
ಚಿನ್ನ ಅಡಮಾನ ಮಾಡಿಸಿಕೊಂಡು ಹೆಚ್ಚು ಬಡ್ಡಿ ಕೊಡುವುದಾಗಿ ಹೇಳಿ ಸೋಮಶೇಖರ್ ಎಂಬಾತ ಮೋಸ ಮಾಡಿದ್ದಾನೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆಡ್ ಬ್ಯಾಂಕ್ ಫೈನಾನ್ಸ್‌ನಲ್ಲಿ ಈ ಹಿಂದೆ ವೈಯಕ್ತಿಕ ಕಾರಣಗಳಿಗಾಗಿ ಚಿನ್ನ ಇಟ್ಟು ಸಾಲ ಪಡೆದಿದ್ದೆ. ಅದೇ ಖಾತೆ ಸಂಖ್ಯೆಯಲ್ಲಿ ಸೋಮಶೇಖರ್ ನನ್ನಿಂದ ಹೆಚ್ಚು ಚಿನ್ನ ಪಡೆದು ಅಡಮಾನ ಇರಿಸಿದ್ದ. ಬ್ಯಾಂಕ್ ವ್ಯವಸ್ಥಾಪಕ ಶಂಕರ್, ಸಹಾಯಕ ವ್ಯವಸ್ಥಾಪಕಿ ಶಾಲಿನಿ ಟಾರ್ಗೆಟ್ ತಲುಪಬೇಕು ಎಂದು ನಂಬಿಸಿ ಅಡಮಾನ ಮಾಡಿಸಿದ್ದರು. ಈಗ ಆ ಸಾಲ 18 ಲಕ್ಷಕ್ಕೆ ತಲುಪಿದೆ. ಚಿನ್ನಾಭರಣ ನನ್ನ ಹೆಸರಿನಲ್ಲಿ ಅಡವಿಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ನೀಡಿಲ್ಲ ಎಂದರು.
ಹಣಕಾಸು ವಿಚಾರದಲ್ಲಿ ವಿಶ್ವಾಸದಲ್ಲಿ ಇದ್ದೆವು. ನಂತರ ಚಿನ್ನ ಬಿಡಿಸಿ ಕೊಡಲು ಕೇಳಿದಾಗ ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಫೋನ್ ಕರೆ ಸ್ವೀಕಾರ ಮಾಡುತ್ತಿರಲಿಲ್ಲ. ಚಿನ್ನಾಭರಣ ವಂಚನೆ ಪ್ರಕರಣ ಬೆಳಕಿಗೆ ಬಂದ ನಂತರ ಅನೇಕರಿಗೆ ಇದೇ ರೀತಿ ಮೋಸ ಮಾಡಿರುವುದಾಗಿ ತಿಳಿದು ಬಂದಿದೆ ಎಂದರು.