ಮಂಡ್ಯ:ರೈತರ ಎದೆಯಲ್ಲಿ ಢವ ಢವ ಶುರುವಾಗಿದೆ. ಭಯಕ್ಕೆ ಕಾರಣವೂ ಇದೆ. ತಮಿಳುನಾಡಿಗೆ ನೀರು ಬಿಡುವ ಸಂಬಂಧ ಕಾವೇರಿ ನೀರು ನಿಯಂತ್ರಣ ಮಂಡಳಿ ತಾತ್ಕಾಲಿಕ ರಿಲೀಫ್ ನೀಡಿರಬಹುದು. ಆದರೆ ಮುಂದೆ ಇದೆ ಮಾರಿ ಹಬ್ಬ ಎಂಬ ಆತಂಕ ಶುರುವಾಗಿದೆ.
ಕೆಆರ್ಎಸ್ಗೆ ಕಾವೇರಿ ಪ್ರಾಧಿಕಾರ ಭೇಟಿ... ರೈತರಿಗೆ ಶುರುವಾಯ್ತು ಢವ ಢವ - undefined
ಕೃಷ್ಣರಾಜಸಾಗರ ಜಲಾಶಯಕ್ಕೆ ಕೇಂದ್ರದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಂಡ ಭೇಟಿ ನೀಡಿ ನೀರಿನ ಸಂಗ್ರಹ ಹಾಗೂ ಅಣೆಕಟ್ಟೆಯ ಪರಿಶೀಲನೆಯಲ್ಲಿ ತೊಡಗಿದೆ. ಬಳಿಕ ಕೇಂದ್ರಕ್ಕೆ ವರದಿ ನೀಡಲಿದೆ.
ಹೌದು, ಇಂದು ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕೆ ಕೇಂದ್ರದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಂಡ ಭೇಟಿ ನೀಡಿ ನೀರಿನ ಸಂಗ್ರಹ ಹಾಗೂ ಅಣೆಕಟ್ಟೆಯ ಪರಿಶೀಲನೆ ನಡೆಸಿದೆ. ಜಲಾಶಯದ ಅಧಿಕಾರಿಗಳಿಂದ ಪ್ರಸ್ತುತ ನೀರಿನ ಮಟ್ಟ, ಪ್ರಸಕ್ತ ವಾಸ್ತವ ಸ್ಥಿತಿಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದೆ. ಇಂದು ಕೆ.ಆರ್.ಎಸ್. ಜಲಾಶಯ ವ್ಯಾಪ್ತಿಯಲ್ಲಿ ಪ್ರವಾಸ ಮಾಡಿ ವಾಸ್ತವ ಅಂಶಗಳ ಮಾಹಿತಿ ಸಂಗ್ರಹ ಮಾಡಲಿದೆ. ನಾಳೆ ಹೇಮಾವತಿ ಹಾಗೂ ಹಾರಂಗಿ ಜಲಾಶಯಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ. ನಾಡಿದ್ದು ಕೇರಳ, ತಮಿಳುನಾಡು ಮತ್ತು ಪಾಂಡಿಚೇರಿಗೂ ಭೇಟಿ ನೀಡಲಿರುವ ತಂಡ, ಅಲ್ಲಿನ ವಾಸ್ತವಿಕ ಅಂಶಗಳ ಮಾಹಿತಿ ಸಂಗ್ರಹ ಮಾಡಲಿದೆ.
ಬಳಿಕ ಕೇಂದ್ರಕ್ಕೆ ವರದಿ ನೀಡಲಿದ್ದು, ವರದಿ ಮುಂದಿನ ಸಭೆಯ ನಿರ್ಧಾರಕ್ಕೆ ಸಾಕ್ಷಿಯಾಗಲಿದೆ. ಕಾವೇರಿ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡಲು ಸೂಚಿಸಿದ ಬೆನ್ನಲ್ಲೇ ಪ್ರಾಧಿಕಾರದ ಸದಸ್ಯರ ಕೆ.ಆರ್.ಎಸ್. ಭೇಟಿ ಕುತೂಹಲ ಮೂಡಿಸಿದೆ. ಇಲ್ಲಿನ ಮಾಹಿತಿ ಸಂಗ್ರಹ ಮಾಡಿ ಮಳೆ ಬಾರದೇ ಇದ್ದರೂ ಯಾವ ಅಂಶದ ಅನ್ವಯ ನೀರು ಬಿಡಲು ಆದೇಶ ನೀಡಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.